ಶೃಂಗೇರಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ

15sri-3
Published on

ಶೃಂಗೇರಿ: ಕಾರ್ತಿಕ ಹುಣ್ಣೆಮೆ ಪ್ರಯುಕ್ತ ಶುಕ್ರವಾರ ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಜಗದ್ಗುರು ಶ್ರೀ ಭಾರತೀತೀರ್ಥ ಮಹಾ ಸ್ವಾಮೀಜಿ ದೀಪ ಹಚ್ಚುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.

ಶೃಂಗೇರಿ ಶ್ರೀಮಠದ ಸುತ್ತಲೂ ರಂಗವಲ್ಲಿ ಚಿತ್ತಾರಗಳು, ಹೊರಪ್ರಾಂಗಣದ ವಿದ್ಯುತ್ ದೀಪಾಲಂಕಾರಗಳು ನೋಡುಗರ ಗಮನ ಸೆಳೆದವು. ಮುಖ್ಯಬೀದಿಯ ರಸ್ತೆ ಇಕ್ಕೆಲೆಗಳಲ್ಲಿ ಜೋಡಿಸಿದ ಹಣತೆಗಳು, ರಂಗವಲ್ಲಿ ಚಿತ್ತಾರಗಳು, ತಳಿರು ತೋರಣಗಳು ದೀಪೋತ್ಸವಕ್ಕೆ ಮೆರಗು ನೀಡಿದವು. ಈಶ್ವರಗಿರಿಯಲ್ಲಿ ಶ್ರೀಮಲಹಾನಿಕರೇಶ್ವರ ಸ್ವಾಮಿಗೆ ಬಿಲ್ವಾರ್ಚನೆ ಹಾಗೂ ಪರಕಾಳಿ ದಹನದ ಧಾರ್ಮಿಕ ಪ್ರಕ್ರಿಯೆ ನೆರವೇರಿತು. ನಂತರ ಶ್ರೀಮಲಹಾನಿಕರೇಶ್ವರ ದೇವಾಲಯದ ಆವರಣ ಹಾಗೂ ಶ್ರೀಮಠದ ಆವರಣದ ತನಕ ಸಹಸ್ರ-ಸಹಸ್ರ ಹಣತೆಗಳು ಬೆಳಗಿಸಿದರು.

ದೀಪೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಸಾಂಪ್ರಾದಾಯಿಕ ಪೂಜಾರಾಧನೆಗಳು, ರುದ್ರಯಾ ನಡೆಯಿತು. ಶ್ರೀಭವಾನೀ ಮಲಹಾನಿಕರೇಶ್ವರ ಸ್ವಾಮಿ, ಶ್ರೀಶಾರದೆ, ಶ್ರೀಶಂಕರಾಚಾರ್ಯ, ಶ್ರೀ ವಿದ್ಯಾಶಂಕರ ಸ್ವಾಮಿ ತೆಪ್ಪೋತ್ಸವ ಹಾಗೂ ಐದು ದಿನಗಳ ಕಾಲ ತುಂಗಾರತಿ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ನಾಟವೈಭವದ ವಿದುಷಿ ದೀಪ್ತಿ ಹೆಗಡೆ ಮತ್ತು ಸಂಗಡಿಗರಿಂದ ನಾಟ್ಯವೈಭವ ಹಾಗೂ ಹೊನ್ನವಳ್ಳಿ ಶ್ರೀವೆಂಕಟೇಶ್ವರ ಯಕ್ಷಗಾನ ಕಲಾ ಸಂಘದಿಂದ ಪೌರಾಣಿಕ ಯಕ್ಷಗಾನ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net