ನ.15ರಂದು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಲಕ್ಷ ಅರ್ಕಪುಷ್ಪಾರ್ಚನೆ - ದೀಪೋತ್ಸವ

maroli
Published on

ಮಂಗಳೂರು: ಇತಿಹಾಸ ಪ್ರಸಿದ್ಧ ಮರೋಳಿ ಶ್ರೀಸೂರ್ಯನಾರಾಯಣ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಪೌರ್ಣಮಿ ನ.15 ರಂದು ಲಕ್ಷ ಅರ್ಕ ಪುಷ್ಪಾರ್ಚನೆ- ದೀಪೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀಕ್ಷೇತ್ರದ ನಡಾವಳಿಯಂತೆ ವೈದಿಕ-ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರಗಲಿರುವುದು. ಬೆಳಿಗ್ಗೆ 6 ರಿಂದ ಉಷಾಪೂಜೆ, ಗಣಪತಿ ಹವನ, ಬೆಳಿಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ಕಲಶ ಪ್ರತಿಷ್ಠೆ, ಲಕ್ಷ ಅರ್ಕಪುಷ್ಪಾರ್ಚನೆ ಪ್ರಾರಂಭ, ಮದ್ಯಾಹ್ನ 12ಕ್ಕೆ ಕಲಾಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ 6ರಿಂದ ದೀಪೋತ್ಸವ ಪ್ರಯುಕ್ತ ದೀಪ ಪ್ರಜ್ವಲನೆಯನ್ನು ಕೆ.ಚಂದ್ರಶೇಖರ್ ಶೆಟ್ಟಿ ದರ್ಬಾರ್‌ಹಿಲ್ ಇವರು ನೆರವೇರಿಸಲಿರುವರು. ರಾತ್ರಿ ಪೂಜೆ ರಂಗಪೂಜೆ ನಂತರ ದೇವರ ಬಲಿ ಹೊರಡಲಿರುವುದು. ಶ್ರೀಭೂತಬಲಿ, ಸೇವಾ ಬಲಿ ಉತ್ಸವ, ಮರೋಳಿ ಗ್ರಾಮ ಸಮಿತಿ ಇವರ ವತಿಯಿಂದ ನೂತನ ಭವ್ಯ ತಿರುಗು ಗುರ್ಜಿ ಮಂಟಪದಲ್ಲಿ ಶ್ರೀದೇವರ ಗುರ್ಜಿ ಉತ್ಸವ, ಅಷ್ಠಾವಧಾನ ಸೇವೆಯು ವಿಶೇಷ ಆಕರ್ಷಣೆಯಾಗಲಿರುವುದು. ನಂತರ ಶ್ರೀಕ್ಷೇತ್ರದ ರಾಜಾಂಗಣದಲ್ಲಿ ದರ್ಶನ ಬಲಿ, ಬಟ್ಲಕಾಣಿಕೆ, ರಾಜಾಂಗಣ ಪ್ರಸಾದ, ಸಂಪ್ರೊಕ್ಷಣೆ, ಮಂತ್ರಾಕ್ಷತೆಯೊಂದಿಗೆ ಕಾರ‌್ಯಕ್ರಮ ಮುಕ್ತಾಯಗೊಳ್ಳಲಿರುವುದು. ರಾತ್ರಿ 8.30 ರಿಂದ ಅನ್ನಸಂತರ್ಪಣೆ ಜರಗಲಿರುವುದು, ಸಮಸ್ತ ಭಕ್ತರು ಈ ಪುಣ್ಯಕಾರ‌್ಯದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net