ಹೊಸ ವರ್ಷದ ಪ್ರಯುಕ್ತ ಪ್ರಸಿದ್ಧ ಯಾತ್ರಾಸ್ಥಳ ಚಿಕ್ಕತಿರುಪತಿಗೆ ಹರಿದುಬಂದ ಭಕ್ತಸಾಗರ

Published on

ಲಕ್ಕೂರು: ಹೊಸ ವರ್ಷಾಚರಣೆ ಅಂಗವಾಗಿ ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಬುಧವಾರ 50 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಪ್ರಸನ್ನ ವೆಂಕಟರಮಣಸ್ವಾಮಿ ದೇವರ ಮೂಲವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಆಭರಣ ಅಲಂಕಾರ ಮಾಡಲಾಗಿತ್ತು. ದೇವಾಲಯ ಆವರಣವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ರಾಜ್ಯ ಹಾಗೂ ತಮಿಳುನಾಡು, ಆಂದ್ರಪ್ರದೇಶ ಸೇರಿ ಹಲವು ಭಾಗಗಳಿಂದ ಭಕ್ತರು ಆಗಮಿಸಿ ಗೋವಿಂದ ನಾಮಸ್ಮರಣೆ ಮಾಡುತ್ತಾ ದೇವರ ದರ್ಶನ ಪಡೆದರು.

ಪ್ರಧಾನ ಅರ್ಚಕ ನಾರಾಯಣಾಚಾರ್, ಅರ್ಚಕರಾದ ರವಿ, ಗೋಪಾಲ್ ಕೃಷ್ಣ ಭಾರಧ್ವಜ್ ನೇತೃತ್ವದಲ್ಲಿ ಪೂಜೆ ನಡೆಯಿತು.

ಭಕ್ತರಿಗೆ ಕುಡಿಯುವ ನೀರು, ಮುಡಿ ಅರ್ಪಿಸಲು ವ್ಯವಸ್ಥೆ, ಸ್ನಾನದ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು. ದೇವಾಲಯ ಆವರಣದಲ್ಲಿ ಗಲಾಟೆ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರಿಗೆ ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯ ಟಿ.ಆರ್.ವೆಂಕಟೇಶ್‌ಗೌಡ ಉಚಿತ ಪ್ರಸಾದ ವಿತರಿಸಿದರು.

ತಹಸೀಲ್ದಾರ್ ನಾಗವೇಣಿ, ದೇವಾಲಯ ಕಾರ್ಯನಿರ್ವಹಣಾಧಿಕಾರಿ ನರಸಿಂಹಯ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಂದನ್‌ವಿ.ಗೌಡ, ಸದಸ್ಯರಾದ ಎಟ್ಟಕೋಡಿ ಎಂ.ವೀರಭದ್ರಪ್ಪ, ಟಿ.ಆರ್.ವೆಂಕಟೇಶ್‌ಗೌಡ, ಟಿ.ಕೆ.ಕಲ್ಪನಾ ಶ್ರೀಧರ್, ಲಕ್ಷ್ಮಮ್ಮ ವೆಂಕಟಪ್ಪ, ಎಚ್.ಆರ್.ಮುನಿರೆಡ್ಡಿ, ಎ.ಎಂ.ನಾರಾಯಣಪ್ಪ, ಎ.ಎನ್.ಹರೀಶ್, ಮಾಜಿ ಸದಸ್ಯರಾದ ಎನ್.ಸುರೇಶ್ ಬಾಬು, ಶ್ರೀನಿವಾಸ್, ಸಂಪಂಗೆರೆ ನಾಗರಾಜ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net