ಯೋಗಿರಾಜ ಮಹಾರಾಜರ ಪುಣ್ಯಾರಾಧನೆ ಸಮಾರೂಪ

12GDG01
ಗದಗ ತಾಲೂಕಿನ ಲಕ್ಕುಂಡಿ ಯೋಗಿರಾಜರ ಪುಣ್ಯಾರಾಧನೆ ಮಹೋತ್ಸವದಲ್ಲಿ ಗದಗ ಆಧ್ಯಾತ್ಮಿಕ ವಿಧ್ಯಾಶ್ರಮದ ನೀಲಮ್ಮತಾಯಿಯವರು ಪ್ರವಚನ ನೀಡಿದರು. ವೆಂಕಟೇಶ ಕುಲಕಣಿರ್, ಅನಿಲ ತೆಂಬದಮನಿ, ನಾಗರಾಜ ಕುಲಕಣಿರ್ ಹಲವರು ಇದ್ದರು
Published on

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಯೋಗಿಪುರುಷ ಯೋಗಿರಾಜ ಮಹಾರಾಜರ 102 ನೇ ಪುಣ್ಯಾರಾಧನೆ ಮಹೋತ್ಸವವು ಮಂಗಳವಾರ ಭಕ್ತಿ ಭಾವದ ಮಧ್ಯೆ ಶ್ರದ್ಧಾ ಕಾರ್ಯಕ್ರಮಗಳೊಂದಿಗೆ ಸಮಾರೂಪವಾಯಿತು.
ಕೊನೆ ದಿನದ ಆರಾಧನೆಯು ಪ್ರಾತಸ್ಮರಣಿ, ಕಾಕಡಾರತಿಯೊಂದಿಗೆ ಆರಂಭವಾಗಿ ವಿದ್ಯಾಶಂಕರ ದೇವರಿಗೆ ಲು ರುದ್ರಾಭಿಷೇಕ ನೆರವೇರಿಸಲಾಯಿತು. ಸಂಪ್ರದಾಯದಂತೆ ಭಜನೆ, ಭಕ್ತರ ಮನೆಗೆ ತೆರಳಿ ಬೀಮಭಿಾಟನೆ ನಡೆಲಾಯಿತು. ಪಾಲಕಿಯಲ್ಲಿ ಸದ್ಗುರುಗಳ ಪಾದುಕೆಯನ್ನು ಮೆರವಣಿಗೆ ಮಾಡಿ ಕನ್ಯೆಯರ ಭಾವಿಯಲ್ಲಿ ಪೂಜೆ ಸಲ್ಲಿಸಿ ಅವಭೃತ ಸ್ನಾನ ನೆರವೇರಿಸಲಾಯಿತು. ಇನ್ನೂ ವಿಶೇಷವಾದ ಶಿವನ ಮೂತಿರ್ಯ ಬುತ್ತಿ ಪೂಜಾ ಕೈಂಕರ್ಯಗಳು ಭಕ್ತರ ಮನ ಸೆಳೆದವು. ಸತ್ಯನಾರಾಯಣ ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡ ವಿವಿಧ ಜಿಲ್ಲೆಯ ಭಕ್ತರು ತಮ್ಮ ಸಂಕಲ್ಪವನ್ನು ಸಮಪಿರ್ಸಿದರು. ವೇದಿಕೆಯಲ್ಲಿ ಶಂಕರಾಚಾರ್ಯರ ಜೀವನ ಚರಿತ್ರೆಯ ಬಾಲ ಶಂಕರ ರೂಪಕವನ್ನು ಆಕಷಿರ್ಸಿತು.
ವೇದಿಕೆ ಕಾರ್ಯಕ್ರಮದಲ್ಲಿ ಗದಗ ಆದ್ಯಾತ್ಮ ವಿದ್ಯಾಶ್ರಮದ ನೀಲಮ್ಮ ತಾಯಿ ಅಸುಂಡಿ ಮಾತನಾಡಿ, ಲಕ್ಕುಂಡಿಯಲ್ಲಿ ಬಾಳಿಹೋದ ಯೋಗಿರಾಜರ ಜೀವನ ಮತ್ತು ಉಪಜೀವನ ದಾರಿದೀಪವಾಗಿದೆ. ಅವರ ನಿಸ್ವಾರ್ಥ ಜೀವನ ಚರಿತ್ರೆಯು ಈ ಸಮಾಜಕ್ಕೆ ಮಾರ್ಗದರ್ಶನವಾಗಿದೆ. ಯೋಗಿರಾಜರು ಬೌದ್ಧಿಕ ಸಂಪತ್ತಿಗಿಂತ ಆಧ್ಯಾತ್ಮಿಕ ಸಂಪತ್ತನ್ನು ಹೊಂದಿದ್ದರು. ಅರಿಷಡ್ವರ್ಗಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದ ಅವರು ಮೋಹ, ಮಾಯೆ, ಮಮಕಾರ ಬಂಧನದಿಂದ ದೂರವಿದ್ದರು. ಹಲವಾರು ಸಂತರು, ಶರಣರು, ಅವಧೂತರು ಈ ನಾಡಿನಲ್ಲಿ ಬಾಳಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರಲ್ಲಿ ಯೋಗಿರಾಜರ ಯೋಗ ಜೀವನವು ವಿಶೇಷವಾಗಿದೆ 102 ವರ್ಷಗಳಾದರೂ ಅವರ ಹೆಜ್ಜೆ ಗುರುತುಗಳು ಇನ್ನೂ ಅಮರವಾಗಿ ಉಳಿದಿವೆ ಎಂದರು.
ನರೇಗಲ್ಲದ ರಾಜ್ಯ ಮಟ್ಟದ ಕಲಾವಿದ ವೆಂಕಟೇಶ ಕುಲಕಣಿರ್ಯವರ ಒಂದು ಂಟೆಗಳ ಕಾಲ ನಡೆಸಿಕೊಟ್ಟ ಭಕ್ತಿ ಸಂಗೀತದ ವಿವಿಧ ಸಂತರ, ಅವಧೂತರ, ದಾಸರ, ಶರಣರ ಪದಗಳು ಜನಮನ ಸೆಳೆದವು.
ಗದಗ ಜಿಲ್ಲಾ ಬ್ರಾಹ್ಮಣ ಸಂದ ಅಧ್ಯ ವೆಂಕಟೇಶ ಕುಲಕಣಿರ್, ಕಾರ್ಯದಶಿರ್ ಅನಿಲ ತೆಂಬದಮನಿ, ಯೋಗಿರಾಜ ಭಕ್ತ ಮಂಡಳಿಯ ಅಧ್ಯ ನಾಗರಾಜ ಕುಲಕಣಿರ್, ಉಪಾಧ್ಯ ಆರ್​.ಡಿ.ದೇಸಾಯಿ, ಗುರುನಾಥ ಜೋಶಿ, ದತ್ತಣ್ಣ ಜೋಶಿ, ಎನ್​. ಆರ್​. ಕುಲಕಣಿರ್, ಎನ್​.ಜಿ. ಕುಲಕಣಿರ್, ಆರ್​.ಜಿ ಕುಲಕಣಿರ್, ಜಿ. ಜಿ ಕುಲಕಣಿರ್, ಶ್ರೀಕಾಂತ ದೇಸಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net