

ಬೆಲಹೊಂಗಲ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಗ್ರಾಮದೇವತೆ (ದೇಮವ್ವ) ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಮುಸ್ಲಿಮರು ಗ್ರಾಮ ದೇವತೆಯರಿಗೆ ಈಚೆಗೆ ಉಡಿ ತುಂಬುವುದರ ಮೂಲಕ ಭಾವೆಕ್ಯ ಸಾರಿದರು. ಸುಮಾರು 18 ವರ್ಷಗಳ ತರುವಾಯು ಗ್ರಾಮದೇವತೆ ಜಾತ್ರೆಯಲ್ಲಿ ಮುಸ್ಲಿಮರು ಎಲ್ಲರ ಜತೆಗೂಡಿ ದರ್ಶನ ಪಡೆದರು. ಮಲ್ಲಯ್ಯ ಚಿಕ್ಕಮಠ ಶಾಸ್ತ್ರಿಗಳು ಧಾರ್ಮಿಕ ಕೆಂಕರ್ಯ ನಡೆಸಿಕೊಟ್ಟರು. ಇಸ್ಮಾಯಿಲ್ ಗಡ್ಕರಿ, ನನ್ನೆಸಾಬ ಗಡ್ಕರಿ, ಇಸಾಕ್ ಗಡ್ಕರಿ, ಬಾಬು ಕಿಲ್ಲೇದಾರ, ದಶಗೀರಸಾಬ್ ಗಡ್ಕರಿ, ಸೆದುಸಾಬ್ ಗಡ್ಕರಿ, ಮಿರಾಸಾಬ್ ಸಂಗೊಳ್ಳಿ, ಮೋದಿನಸಾಬ್ ಗಡ್ಕರಿ, ಈರಪ್ಪ ಉಪ್ಪಾರ, ದುಂಡಪ್ಪ ಉಪ್ಪಾರ, ಮಹೇಶ ಸುಣಧೂಳಿ, ಶಂಕರ ಅಂಗಡಿ, ಮಹಾಂತೇಶ ಕುಂದರನಾಡ, ಸುಧಾಕರ ಕುಲಕರ್ಣಿ, ಭಾಂವಿಹಾಳ ಗ್ರಾಪಂ ಅಧ್ಯ ಸುರೇಶ ಚಿಕ್ಕಮಠ, ಶ್ರೀಶೆಲ ಗಾಳಿಮರಡಿ, ವೀರಭದ್ರಯ್ಯ ಯರಝರ್ವಿಮಠ ಇತರರು ಇದ್ದರು.