

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದ ಪ್ರಮುಖ ಬೀದಿಯಲ್ಲಿ ಸರ್ವರ ಭಾವಚಿತ್ರ ಮೆರವಣಿಗೆಯೊಂದಿಗೆ ಮಹಿಳೆಯರ ರ್ಪೂಣ ಕುಂಭೋತ್ಸವ, ಮಹಾಂತೇಶ್ವರ ಭಜನಾ ಸಂದ ಜಾನಪದ, ತತ್ವಪದಗಳ ಭಜನೆ ಗಮನ ಸೆಳೆಯಿತು.
ಸರ್ವ ಜಯಂತಿ ಅಂಗವಾಗಿ ಗ್ರಾಮದ ಹತ್ತು ಶಾಲೆಗಳ ಪ್ರಾಥಮಿಕ, ಪ್ರೌಢಶಾಲೆ, ಹಾಗೂ ಕಾಲೇಜ್ನ 50 ಬಡ ವಿದ್ಯಾಥಿರ್ಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯ ಕೆ.ಎಸ್.ಪೂಜಾರ, ಉಪಾಧ್ಯೆ ಪುಷ್ಪಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಸ್.ಪೂಜಾರ, ಒಂದೊಂದು ಸಮುದಾಯದಲ್ಲಿ ಒಬ್ಬ ಶರಣ, ಸಂತರು ಸಮಾಜಮುಖಿ ಕಾರ್ಯದಲ್ಲಿ ತೊಡಗಿ ಅದ್ವೀತಿಯ ಸಾಧನೆಯನ್ನು ಮಾಡಿದ್ದಾರೆ. ಅದರಂತೆ ಸರ್ವರು ಸಹ ತಾವು ನುಡಿದಂತೆ ನಡೆದು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಶ್ರಮ ವಹಿಸಿ ಇಂದು ನಮಗೆ ದಾರಿ ದೀಪವಾಗಿದ್ದಾರೆ. ಜಯಂತಿ ಅಂಗವಾಗಿ ಬಡ ವಿದ್ಯಾಥಿರ್ಗಳಿಗೆ ಬ್ಯಾಗ್ ವಿತರಣೆ ಮಾಡಿದ್ದು ಶ್ಲಾನಿವಾಗಿದೆ. ಇನ್ನೂ ಕುಂಬಾರ ಸಮುದಾಯದ ತಮ್ಮ ಸಂದ ಕಟ್ಟಡ ನಿರ್ಮಾಣದ ನಿವೇಶನವನ್ನು ನೀಡುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚಚಿರ್ಸಿ ತೀರ್ಮಾನಿಸಲಾಗುವುದು ಎಂದರು.
ಮಾಜಿ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ ಜನ ಕಲ್ಯಾಣಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದ ಸರ್ವರ ತತ್ವಾದರ್ಶಗಳು ಇಂದಿಗೂ ಸಹ ಪ್ರಸ್ತುತವಾಗಿವೆ. ಸರ್ವರ ತ್ರಿಪದಿ ವಚನಗಳನ್ನು ಅರ್ಥೈಸಿಕೊಂಡರೆ ನಮ್ಮ ಬದುಕು ಶ್ರೇಷ್ಠತೆಯ ಕಡೆ ಹೋಗುತ್ತದೆ. ಆದ್ದರಿಂದ ಕೇವಲ ಜಯಂತಿ ಮಾತ್ರ ಆಚರಣೆ ಮಾಡದೇ ಅವರ ತ್ರಿಪದಿಗಳನ್ನು ಶಾಲಾ ಮಕ್ಕಳಿಗೆ ಸ್ಪರ್ದೇಯ ರೂಪದಲ್ಲಿ ಏರ್ಪಡಿಸಿ ಅದರಲ್ಲಿ ಪ್ರತಿಭಾನ್ವಿತರಾದವರಿಗೆ ಬಹುಮಾನ ಕೊಟ್ಟರೇ ಸೂಕ್ತವಾಗುತ್ತದೆ ಎಂದು ಸಲಹೆ ನೀಡಿದರು.
ಈಶ್ವರಪ್ಪ ಕುಂಬಾರ ಅಧ್ಯತೆ ವಹಿಸಿದ್ದರು. ಗ್ರಾ. ಪಂ ಸದಸ್ಯ ರುದ್ರಪ್ಪ ಮುಸ್ಕಿನಭಾವಿ, ವೀರಣ್ಣ ಚಕ್ರಸಾಲಿ, ಪೀರಸಾಬ ನದಾ, ಮಹಾಂತೇಶ ಕಮತರ, ಲಲಿತಾ ಗದಗಿನ, ರೇವಣಸಿದ್ದಪ್ಪ ಮುಳಗುಂದ, ಮಂಜುಳಾ ಮೆಣಸಿನಕಾಯಿ, ವಿರುಪಾಪ್ಪ ಬೆಟಗೇರಿ, ಶಿವಾನಂದ ಚಕ್ರಸಾಲಿ ಉಪಸ್ಥಿತರಿದ್ದರು.