

ಗದಗ: ವರುಣ ದೇವನ ಕೃಪೆಗಾಗಿ ತಾಲೂಕಿನ ಲಕ್ಕುಂಡಿಯ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ, ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಕಳೆದ ಒಂದು ತಿಂಗಳಿಂದ ಮಳೆಯಿಲ್ಲದೆ ಮುಂಗಾರು ಬಿತ್ತನೆಯ ಬೆಳೆಗಳು ಒಣಗುತ್ತಿವೆ. ರೈತರು ಮಳೆ ದೇವನ ಕೃಪೆಗಾಗಿ ದಂಡಿನ ದುರ್ಗಾದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಿದರು. ಮುತೈದೆಯರು ಗ್ರಾಮದ ವಿವಿಧ ದೇವಿ ದೇವಸ್ಥಾನಗಳಿಗೆ ತೆರಳಿ ಉಡಿ ತುಂಬುವ ಕಾರ್ಯವನ್ನು ನೆರವೇರಿಸಿದರು. ದುರ್ಗಾದೇವಿ ಕೆರೆಯಲ್ಲಿ ಈಶ್ವರ ಮತ್ತು ಬಸವಣ್ಣನ ಮೂತಿರ್ಯನ್ನು ತಯಾರಿಸಿ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ರೈತರು ವರುಣ ದೇವ ಕೃಪೆಗೆ ಸಂಕಲ್ಪ ಮಾಡಿದರು. ನಂತರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು.