

ವಿಜಯವಾಣಿ ಸುದ್ದಿಜಾಲ ಗದಗ
ಲಕ್ಕುಂಡಿ ಬಗ್ಗೆ ಅಭಿಮಾನ ಹೊಂದಿ ಮೊದಲ ಬಾರಿ ಶಾಸಕನಾದ ಸಂದರ್ಭದಲ್ಲಿ ಆಗಬೇಕಾಗಿರುವ ಅಭಿವೃದ್ಧಿ, ಸಂಶೋದನೆ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದೆ. ಅಂತಹ ಕನಸುಗಳನ್ನು ನನಸು ಮಾಡಲು ಭಗವಂತ ನಿಮ್ಮ ಮೂಲಕ ಈ ಸುವರ್ರ್ಣಾವಕಾಶ ಒದಗಿಸಿದ್ದಾನೆನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಹೇಳಿದರು.
ತಾಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಶ್ರಯದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 13 ಆರಕ್ಷಿತ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಲಕ್ಕುಂಡಿಗೆ ಹೋದವ ಹಂಪಿಗೆ ಹೊಗುತ್ತಾನೆ. ಹಂಪಿಗೆ ಹೋದವ ಲಕ್ಕುಂಡಿಗೆ ಬಂದೇ ರ್ಬತಾನೆ ಎನ್ನುವಂತಾಗಬೇಕು. ಕಟ್ಟೆಯ ಕೆಳಗೆ ಅವಿತಿರುವ ಕಲೆ, ಶಿಲ್ಪಕಲೆಗಳು ಅದ್ಬುತ ಕಲಾಕೃತಿಗಳನ್ನು ಉತ್ಖನನ ಆಗಬೇಕಾದರೆ ಗ್ರಾಮಸ್ಥರ ಪ್ರೀತಿ, ಸ್ನೇಹ, ವಿಶ್ವಾಸ, ತ್ಯಾಗ ಬೇಕಾಗುತ್ತದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅದ್ಬುತ ಶಿಲ್ಪಕಲೆಗಳನ್ನು ಲಕ್ಕುಂಡಿ ಹೊಂದಿದೆ. ಲಕ್ಕುಂಡಿಯಲ್ಲಿ ತಿಪ್ಪೆಯನ್ನು ಅಗೆದರೂ 20ಕ್ಕೂ ಹೆಚ್ಚು ಶಿಲ್ಪಕಲೆಗಳು ಸಿಗುತ್ತವೆ. ಕಟ್ಟೆಯನ್ನು ಅಗೆದರೂ ಮ್ಯೂಸಿಯಂ ಹಿಡಿಸಲಾಗದಷ್ಟು ಪಾರಂಪರಿಕ ಶಿಲ್ಪ ಕಲೆಗಳು ದೊರೆಯುತ್ತವೆ. ಆದ್ದರಿಂದ ಗ್ರಾಮಸ್ಥರು, ಯುವಕರು ಶಿಲ್ಪಕಲೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಸುಮಾರು 25 ಸಾವಿರ ಸ್ಮಾರಕಗಳು ಇವೆ. ಅವೆಲ್ಲವನ್ನು ಸರ್ಕಾರದಿಂದ ಅಭಿವೃದ್ಧಿ ಗೊಳಿಸುವುದರ ಜೊತೆಗೆ ಊರಿನ ಮತ್ತು ಸ್ಮಾರಕಗಳ ಬಗ್ಗೆ ಅಭಿಮಾನ ಹೊಂದಿ ಅಮೇರಿಕದಲ್ಲಿರುವ ಕನ್ನಡಿಗರು ಮುಂದೆ ಬಂದು ದತ್ತು ತೆಗೆದುಕೊಳ್ಳುತ್ತಿರುವುದು ಗರ್ವ ಮತ್ತು ಹೆಮ್ಮೆಯ ವಿಷಯ ಎಂದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಕುಂಡಿಗೆ ತನ್ನದೇ ಆದ ಐತಿಹಾಸಿಕ ಸ್ಥಾನವಿದೆ. ಪಾರಂಪರಿಕ ಸ್ಮಾರಕಗಳಿಗೆ ಹೆಸರುವಾಸಿ ಆಗಿರುವ ಲಕ್ಕುಂಡಿಯಲ್ಲಿ 101 ದೇವಾಲಯ, 101 ಬಾವಿಗಳಿವೆ ಎಂಬುದು ಇತಿಹಾಸದಿಂದ ತಿಳಿದುಬಂದರೂ ಸದ್ಯ 30 ದೇವಾಲಯಗಳು, 30 ಬಾವಿಗಳು ಮಾತ್ರ ಕಂಡುಬರುತ್ತಿವೆ. ಅವುಗಳ ರಕ್ಷಣೆ ಹಾಗೂ ಅಭಿವೃದ್ಧಿ ಅವಶ್ಯಕ. ಸರ್ಕಾರ ಯಾವುದೇ ಇರಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುವುದು ಗ್ರಾಮಸ್ಥರ ಜಾವಾಬ್ದಾರಿ ಆಗಿದೆ. ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ 43 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಸಚಿವ ಎಚ್.ಕೆ. ಪಾಟೀಲ ಅವರು 5 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆರಂಭಿಕವಾಗಿ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದರು.
ಶಾಸಕ ಜಿ. ಎಸ್. ಪಾಟೀಲ ಮಾತನಾಡಿ, ಸಿಂಗಟಾಲೂರ ಏತನೀರಾವರಿ ಮೂಲಕ ಲಕ್ಕುಂಡಿ ಕೆರೆಗೆ ನೀರು ತರುವ ವ್ಯವಸ್ಥೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಗದಗ- ರೋಣ ತಾಲೂಕಿನ ಭಾಗದ ಗದ್ದಿಹಳ್ಳಕ್ಕೆ ನೀರು ಹರಿಸುವಂತೆ ಮಾಡಬೇಕು. ಕಣಗಿನಹಾಳ, ಕೋಟುಮುಚಗಿ, ಹರ್ಲಾಪೂರ, ನೀರಲಗಿ, ಬೆನಕೊಪ್ಪ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ದೇಶದ ಸಂಪತ್ತಾಗಿರುವ ಖನಿಜ, ಆಹಾರ ದೇವಾಲಯಗಳ, ಶಿಲ್ಪಕಲೆ, ಸಂಗೀತ, ಸಾಹಿತ್ಯವನ್ನು ಸಂರಕ್ಷಣೆ ಜೊತೆಗೆ ಅಭಿವೃದ್ಧಿ ಎಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಜೋಣೋರ್ದ್ಧಾರ ಆಗಬೇಕಿರುವ 8 ದೇವಸ್ಥಾನಗಳ ಉತಾರಗಳನ್ನು ಗ್ರಾಪಂ ಅಧ್ಯಕ್ಷ ಕೆಂಚಪ್ಪ ಪೂಜಾರ ಅವರು ಸಚಿವ ಎಚ್.ಕೆ. ಪಾಟೀಲ ಅವರಿಗೆ ಹಸ್ತಾಂತರಿಸಿದರು.
ಪುಷ್ಪಾ ಪಾಟೀಲ, ಗೋವಿಂದರೆಡ್ಡಿ, ಎಂ. ಬಿ. ಸಂಕದ, ಶರಣು ಗೋಗೇರಿ, ಸಿದ್ಧಲಿಂಗೇಶ್ವರ ಪಾಟೀಲ, ವಿವೇಕ ಯಾವಗಲ್, ಅಶೋಕ ಮಂದಾಲಿ ಇತರರು ಇದ್ದರು.
13 ಸ್ಮಾರಕಗಳು:
ಹಾಲಗುಂಡಿ ಬಸವೇಶ್ವರ ದೇವಾಲಯ ಮತ್ತು ಮಜ್ಜನ ಬಾವಿ, ಈಶ್ವರ ದೇವಾಲಯ, ಕಲ್ಮಠ ದೇವಾಲಯ ಮತ್ತು ಕಲ್ಮಠ ಬಾವಿ, ಕಣ್ಣರ ಬಾವಿ, ಕೋಟೆ ವೀರಭದ್ರೇಶ್ವರ ದೇವಾಲಯ, ಲಕ್ಷಿ$್ಮನಾರಾಯಣ ದೇವಾಲಯ, ಲೆಕ್ಕದ ವೀರಣ್ಣ ದೇವಾಲಯ, ಈಶ್ವರ ಗುಡಿ ಹತ್ತಿರದ ಮಾಳಿ ಬಾವಿ, ಮಲ್ಲಿಕಾರ್ಜುನ ದೇವಾಲಯ, ನೀಲಕಂಠೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ಕಪ್ಪಲಿ ಬಾವಿ, ವಿರುಪಾಕ್ಷ ದೇವಾಲಯ ಸೇರಿ ಒಟ್ಟು 13 ಆರಕ್ಷಿತ ಸ್ಮಾರಕಗಳು
ಕೋಟ್:
ಇಲ್ಲಿ ದೇವಸ್ಥಾನ ಜೋಣೋದ್ದಾರ ಸ್ವಾಗತಾರ್ಹ. ಪ್ರಸಕ್ತ ಸಾಲಿನ ಲಕ್ಕುಂಡಿ ಉತ್ಸವಕ್ಕೂ ಚಾಲನೆ ನೀಡಬೇಕು. ಜೊತೆಗೆ ಸ್ಮಾರಕಗಳ ರಕ್ಷಣೆ, ಸ್ಮಾರಕಗಳ ಅಭಿವೃದ್ಧಿ ಗ್ರಾಮಸ್ಥರ ಹೊಣೆಗಾರಿಕೆಯೂ
- ಸಿ.ಸಿ. ಪಾಟೀಲ, ಶಾಸಕ