

ಮೈಸೂರು; ನಗರದ ಸಾಡೆ ರಸ್ತೆಯಲ್ಲಿರುವ ಮಹಿಳೆಯರ ಬಟ್ಟೆ ಅಂಗಡಿಯಲ್ಲಿ ಕಳ್ಳರು 1 ಲಕ್ಷ ರೂ. ದೋಚಿದ್ದಾರೆ.
ಅಂಗಡಿ ವಾಲೀಕ ಮೊಹಮದ್ ಅಮೀನಾ ಅವರು ಇತ್ತೀಚೆಗೆ ವ್ಯಾಪಾರ ಮುಗಿಸಿ ಮನೆಗೆ ತೆರಳಿದ್ದರು. ಮರುದಿನ ಅಂಗಡಿಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮಳಿಗೆಯ ರೋಲಿಂಗ್ ಶೆಟರ್ ಮೀಟಿ ಒಳನುಗ್ಗಿರುವ ಖದೀಮರು 1 ಲಕ್ಷ ರೂ. ದೋಚಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.