ಅನ್ನದಾನ ಸೇವೆಗೆ ಲಕ್ಷ ರೂ. ದೇಣಿಗೆ ಕೊಟ್ಟ ಭಿಕ್ಷುಕಿ ಅಜ್ಜಿ..!

bikshuki ajji
Published on

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ಹಾಗೂ ಆಂಜನೇಯ ದೇವಳದ ಸಮೀಪದ ಪರಿಸರದಲ್ಲಿ ಹೊಟ್ಟೆಹೊರೆಯಲು ಭಿಕ್ಷೆ ಬೇಡಿ ಸಾರ್ವಜನಿಕವಾಗಿ ‘ಅಜ್ಜಿ’ ಎಂದು ಕರೆಯಲ್ಪಡುತ್ತಿದ್ದ ಅಶ್ವತ್ಥಮ್ಮ, ಗುರುವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅನ್ನದಾನ ಸೇವೆಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

‘ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ ಮತ್ತು ಹಸಿದವರ ಹೊಟ್ಟೆ ತುಂಬಲಿ, ಕರೊನಾದಿಂದ ಮುಕ್ತಿ ದೊರೆಯಲಿ’ ಎಂಬ ಪ್ರಾರ್ಥನೆಯೊಂದಿಗೆ ತಾನು ಸಂಗ್ರಹಿಸಿದ ಸಂಪತ್ತಿನ ಒಂದು ಭಾಗವನ್ನು ಗುರುನರಸಿಂಹ ದೇವರ ಪಾದಕಮಲಕ್ಕೆ ಗುರುವಾರ ಸಮರ್ಪಿಸಿದರು. ದೇವಳದ ಅರ್ಚಕ ಜನಾರ್ದನ ಅಡಿಗ ಮತ್ತು ವ್ಯವಸ್ಥಾಪಕ ಕೆ.ನಾಗರಾಜ ಹಂದೆ ದೇವರ ಪ್ರಸಾದ ನೀಡಿ ಗೌರವಿಸಿದರು.

ಸಾಲಿಗ್ರಾಮ ದೇವಳದ ಕೆರೆ ಬಳಿಯಿರುವ ದೋಣಿ ಇಡುವ ಕೊಠಡಿಯೇ ಇವರ ವಾಸಸ್ಥಳ. ದೇವಳದ ಸಾರ್ವಜನಿಕ ಶೌಚ, ಸ್ನಾನಗೃಹಗಳನ್ನು ಉಪಯೋಗಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net