

ಬೂದಿಕೋಟೆ: ಚೆನ್ನೈ- ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆ ನಿಮಾರ್ಣಕ್ಕೆ ಮಣ್ಣಿಗಾಗಿ ಬಳಕೆ ಮಾಡಿಕೊಂಡಿದ್ದ ಕೆರೆಗಳ ಸ್ವರೂಪ ಈಗ ಹಾಳಾಗಿದ್ದು, ಹತ್ತಾರು ಅಡಿಗಳಷ್ಟು ತೋಡಿ ಈಗ ಅವುಗಳನ್ನು ಹಾಗೇ ಬಿಡಲಾಗಿದ್ದು, ಸಂಪೂರ್ಣ ಚಿತ್ರಣವೇ ಬದಲಾಗಿದೆ.
ಬೆಂಗಳೂರು&ಚೆನ್ನೆ$ ಮಾರ್ಗದಲ್ಲಿ ಸಂಚರಿಸಲು ಎರಡೂ ನಗರಗಳ ನಡುವಿನ ಪ್ರಯಾಣ 6 ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗಿತ್ತು. ಆದರೆ, ಅದನ್ನು 3 ಗಂಟೆಗೆ ಕಡಿಮೆ ಮಾಡಲು ಕೇಂದ್ರ ಸರ್ಕಾರದಡಿ ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆ ರೂಪಿಸಲಾಗಿದೆ. 71 ಕಿಮೀ ಮಾರ್ಗದ ರಸ್ತೆ ನಿರ್ಮಾಣಕ್ಕೆ ಬಹಳಷ್ಟು ಮಣ್ಣು ಬೇಕಿದ್ದಾಗ ಕಾಮಗಾರಿ ವೇಳೆ ಬೇರೆ ಕಡೆಯಿಂದ ತರದೇ, ಹಣ ಉಳಿತಾಯದ ಉಪಾಯದಿಂದ ಸ್ಥಳಿಯವಾಗಿ ಪೂರ್ವಜರು ನಿರ್ಮಿಸಿರುವ ಕೆರೆಗಳನ್ನೇ ಆಯ್ಕೆ ಮಾಡಿಕೊಂಡು, ಮಣ್ಣು ಸಂಗ್ರಹಿಸಲು ಸರ್ಕಾರದ ನಿಯಮ ಗಾಳಿಗೆ ತೂರಿದ ಗುತ್ತಿಗೆದಾರರು ಯಂತ್ರಗಳಿಂದ ಕೆರೆಗಳನ್ನು ಅಗೆದು ಎಕ್ಸ್ಪ್ರೆಸ್ ರಸ್ತೆ ನಿರ್ಮಾಣವಾಗುತ್ತಿದ್ದಂತೆ ಜಲಮೂಲಗಳ ರಕ್ಷಣೆ ಮತ್ತು ಅವುಗಳಿಗೆ ಸ್ವರೂಪ ನೀಡುವುದನ್ನೇ ಹೆದ್ದಾರಿ ಪ್ರಾಧಿಕಾರ ಮತ್ತು
ಗುತ್ತಿಗೆದಾರರು ಮರೆತಿದ್ದಾರೆ.
ಕೆರೆಯಲ್ಲಿ ಯಾವುದೇ ಕಾರಣಕ್ಕೂ ಮಣ್ಣು ತೆಗೆಯಬೇಕಾದರೆ ನಿಗದಿತ ಆಳದವರೆಗೆ ಮಾತ್ರ ತೆಗೆಯಬೇಕು. ಆದರೆ ಕಾರಿಡಾರ್ ರಸ್ತೆ ನಿಮಾರ್ಣಕ್ಕೆ ಗುತ್ತಿಗೆದಾರರು ತಮಗೆ ಇಷ್ಟ ಬಂದ ರೀತಿ ಮಣ್ಣು ತೆಗೆದಿದ್ದಾರೆ. ಇದರಿಂದಾಗಿ ಜಾನುವಾರುಗಳು ಸೇರಿ ಇತರೆ ಪ್ರಾಣಿಗಳು ಕೆರೆಗಳಿಗೆ ಇಳಿದು ನೀರು ಕುಡಿಯಲು ಸಾಧ್ಯವಿಲ್ಲದಂತಾಗಿದೆ. ಒಂದು ವೇಳೆ ಜೋರಾದ ಮಳೆ ಬಂದು ಈ ಕೆರೆಗಳು ತುಂಬಿದರೆ ಆಳ ಗೊತ್ತಿಲ್ಲದೆ ಪ್ರಾಣಿಗಳು ಮತ್ತು ಮನುಷ್ಯರು ಮೃತಪಡುವುದು ಖಚಿತವಾಗಿದೆ ಅಭಿವೃದ್ಧಿಯ ನೆಪದಲ್ಲಿ ಹಾಳಾಗಿರುವ ಹಾಗೂ ದೊಡ್ಡ ಮಟ್ಟದ ಗುಂಡಿ ತೆಗೆದಿರುವ ಕೆರೆಗಳನ್ನು ಈಗ ರಸ್ತೆ ನಿಮಾರ್ಣದ ಗುತ್ತಿಗೆದಾರರ ಮೂಲಕವೇ ಮಣ್ಣು ತುಂಬಿಸಿ ಸಮತಟ್ಟು ಮಾಡುವ ಕಾರ್ಯ ಆರಂಭಿಸಬೇಕು. ಇಲ್ಲವಾದರೆ ಜಿಲ್ಲಾಡಳಿತ ಯಾವುದಾದರೊಂದು ಯೋಜನೆಯ ಮೂಲಕ ಕೆರೆ ಅಭಿವೃದ್ಧಿ ಮಾಡಲು ಮುಂದಾಗಬೇಕು. ನಡೆಯದಿದ್ದರೆ ಮುಂದಿನ ತಲೆಮಾರಿನವರು ಕೆರೆ ಬಳಕೆ ಮಾಡುವುದು ಅಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಲಮೂಲ ನಾಶ
ಕಾಮಗಾರಿಯ ಆರಂಭದಲ್ಲಿಯೇ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಹೆಚ್ಚು ಆಳದವರೆಗೂ ಕೆರೆಗಳಿಂದ ಮಣ್ಣು ತೆಗೆಯುವುದನ್ನು ತಡೆಯುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದರೂ ಕೆರೆಗಳ ಸ್ವರೂಪವನ್ನೇ ಹಾಳು ಮಾಡಲು ಹೊರಟಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಕೇವಲ ರಸ್ತೆ ನಿಮಾರ್ಣದ ಉದ್ದೇಶ ಹೊಂದಿದ್ದ ಅಧಿಕಾರಿಗಳು ಸಾರ್ವಜನಿಕ ಸಂಪನ್ಮೂಲಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇತ್ತ ಹೋರಾಟಗಾರರ ಮನವಿಗಳಿಗೆ ಸೊಪ್ಪು ಹಾಕದ ಅಧಿಕಾರಿ ವರ್ಗ ತಮಗೇನು ಏನೂ ಆಗಿಲ್ಲ ತಮಗೇನು ಗೊತ್ತಿಲ್ಲದಂತೆ ಸುಮ್ಮನಾಗಿಬಿಟ್ಟರು. ಅದರ ಪರಿಣಾಮ ಇಂದು ಹಲವು ಕೆರೆಗಳು ವಿನಾಶದ ಅಂಚಿಕೆ ಹೋಗಿವೆ ಎಂದರೆ ತಪ್ಪಾಗಲಾರದು.
ರಸ್ತೆಗಳ ಅಭಿವೃದ್ಧಿ ಹೆಸರಲ್ಲಿ ಕೆರೆಗಳನ್ನು ನಾಶ ಮಾಡುವುದು ಸಮಂಜಸವಲ್ಲ. ಚೆನ್ನೆ$ ಮಾರ್ಗದ ರಸ್ತೆ ಅಭಿವೃದ್ಧಿಯು ಕೇಂದ್ರ ಸರ್ಕಾರದಡಿ ಬರಲಿದ್ದು, ಅಭಿವೃದ್ಧಿಗಾಗಿ ಕೆರೆಯಲ್ಲಿ ಮಣ್ಣು ತೆಗೆಯಬೇಕಾದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆದು ನಿಗದಿ ಮಾಡಿದ ಮಟ್ಟದಲ್ಲಿ ಮಾತ್ರ ಮಣ್ಣು ತೆಗೆಯಬೇಕಿತ್ತು, ನಿಗದಿತಕ್ಕಿಂತ ಹೆಚ್ಚು ತೆಗೆದು ಕೆರೆ ಹಾಳು ಮಾಡಿದ್ದು, ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. - ಎಸ್.ವೆಂಕಟೇಶಪ್ಪ, ತಹಸೀಲ್ದಾರ್ ಬಂಗಾರಪೇಟೆ ನಾಗರಿಕತೆ ಬೆಳೆದಂತೆ ನಗರಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಸೂಕ್ತವಾಗಿದೆ. ಆದರೆ, ರಸ್ತೆಗಳ ಅಭಿವೃದ್ಧಿ ನೆಪದಲ್ಲಿ ನೀರಿನ ಮೂಲಗಳಾದ ಕೆರೆಗಳನ್ನು ಹಾಳು ಮಾಡುವುದು ಸಮಂಜಸವಲ್ಲ. ಆದ್ದರಿಂದ ಗುತ್ತಿಗೆದಾರರ ದುರಾಸೆಯಿಂದ ಅವನತಿಗೆ ತಲುಪಿದ ಕೆರೆಗಳನ್ನು ಮತ್ತೆ ಜಿಣೋರ್ದ್ಧಾರಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಅಥವಾ ರಸ್ತೆ ಹೆಸರಲ್ಲಿ ಕೋಟಿ ಕೋಟಿ ಸಂಪಾದನೆ ಮಾಡಿರುವ ಗುತ್ತಿಗೆದಾರರ ಮೂಲಕ ಅಭಿವೃದ್ಧಿಪಡಿಸಬೇಕು. - ಮುನಿಸ್ವಾಮಿಶೆಟ್ಟಿ ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ