

ಮುಂಡರಗಿ: ಉತ್ತಮ ಕೆಲಸಗಳನ್ನು ಹಾಗೂಸಮಾಜದ ಕಟ್ಟಕಡೆ ಮನುಷ್ಯನಿಗೆ ಪ್ರಯೋಜಕರ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡುತ್ತಿದೆ. ಅಭಿವೃದ್ಧಿ ಕಾರ್ಯ ಮಾಡುವುದೆ ಡಬಲ್ ಇಂಜಿನ್ ಸರ್ಕಾರದ ಧ್ಯೇಯೆ. ನವ ಕರ್ನಾಟಕ, ನವ ಭಾರತ ನಿರ್ಮಾಣ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಮಾಡಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ತಾಲೂಕಿನ ಮುರುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ೨೯ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಜಾಲವಾಡಗಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಕ್ಕೆ ಬದ್ಧತೆ ಮತ್ತು ವಿಶ್ವಾಸರ್ಹತೆ ಇದ್ದಾಗ ಮಾತ್ರ ಜನರ ಕೆಲಸವನ್ನು ಮಾಡಲು ಸಾಧ್ಯ. ಜಾಲವಾಡಗಿ ಏತ ನೀರಾವರಿ ಯೋಜನೆಯಿಂದ ೨೯ಕೆರೆಗಳು ತುಂಬುವುದರಿAದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಣೆ ಸಹಕಾರಿಯಾಗುತ್ತದೆ. ನೀರನ್ನು ಹಿತಮಿತವಾಗಿ ಉಪಯೋಗಿಸಬೇಕು. ಜಲಜೀವನ್ ಮಿಷನ್ ಯೋಜನೆಯಿಂದ ೧೧ಕೋಟಿಗೂ ಹೆಚ್ಚು ಕುಟುಂಬಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಿಂದ ಹಾವೇರಿ-ಗದಗ ಲೋಕಸಭಾವ್ಯಾಪ್ತಿ ೨ಸಾವಿರ ಕೋಟಿಗಿಂತ ಹೆಚ್ಚು ಅನುದಾನದಲ್ಲಿ ಲಿಫ್ಟ್ ಇರಿಗೇಷನ್ ಯೋಜನೆ ಮೂಲಕ ಸುಮಾರು ೪೦೦ನಿಂದ ೫೦೦ಕೆರೆ ತುಂಬಿಸುವ ಕೆಲಸ ಮಾಡಲಾಗಿದೆ ಎಂದರು.
ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಬದುಕಿಗೆ ನೀರೇ ಜೀವಾಳ. ಜಾಲವಾಡಗಿ ಏತ ನೀರಾವರಿ ಯೋಜನೆಯು ಜನರು ನೆನಪಿಸುವಂತ, ಶಾಶ್ವತವಾದ ಕೆಲಸವಾಗಿದೆ.ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತ ಕೆಲಸ ಮಾಡಲಾಗಿದೆ. ಯೋಜನೆಯಿಂದ ಪ್ರತಿಯೊಬ್ಬರಿಗೂ, ಪಶು, ಪ್ರಾಣಿ, ಪಕ್ಷಿ ಸಂಕುಲಕ್ಕೆ ಉಪಯೋಗವಾಗಲಿದೆ ಎಂದು ತಿಳಿಸಿದರು.
ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಈ ಯೋಜನೆ ಮೂಲಕ ಕೆರೆ ತುಂಬುವುದರಿAದ ಅಂತರ್ಜಲ ವೃದ್ಧಿಯಾಗುತ್ತದೆ. ರೈತರಿಗೆ, ಜನರಿಗೆ ಪ್ರಯೋಜನವಾಗುತ್ತದೆ. ಒಳ್ಳೆಯ ಕೆಲಸ ಮಾಡಿದವರಿಗೆ ತಾವು ಸದಾ ಬೆಂಬಲಿಸಬೇಕು ಎಂದರು.
ಡಾ.ಕುಮಾರಸ್ವಾಮಿ ಹಿರೇಮಠ, ಪುಟ್ಟನಗೌಡ ಪಾಟೀಲ, ಜಾಲವಾಡಗಿ ವೀರನಗೌಡ ಪಾಟೀಲ ಮಾತನಾಡಿದರು.
ಬಿಜೆಪಿ ಡಂಬಳ ಮಂಡಲ ಅಧ್ಯಕ್ಷ ರವಿ ಕರಿಗಾರ, ಬಾಗೇವಾಡಿ ಗ್ರಾ.ಪಂ.ಅಧ್ಯಕ್ಷೆ ಶಕುಂತಲಾ ಪಾಟೀಲ, ಮುರುಡಿ ಗ್ರಾ.ಪಂ.ಅಧ್ಯಕ್ಷೆ ಹೊನ್ನವ್ವ ಮಲಿಯಮ್ಮನವರ, ಕವಿತಾ ಉಳ್ಳಾಗಡ್ಡಿ, ಸಣ್ಣವೀರಪ್ಪ ಹಳ್ಳೆಪ್ಪನವರ, ಎಸ್.ವಿ.ಪಾಟೀಲ, ವೀರನಗೌಡ ಪಾಟೀಲ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಅಂದಪ್ಪ ಹಾರೋಗೇರಿ, ಬಸವರಾಜ ಸಂಗನಾಳ, ನಾಗರಾಜ ಕಾಟ್ರಳ್ಳಿ, ಮಹಾಂತೇಶ ಬೂದಿಹಾಳ, ಈಶಪ್ಪ ರಂಗಪ್ಪನವರ, ರತ್ನಪ್ಪ ನಗರ, ಕೃಷ್ಣ ರಾಠೋಡ, ಪರುಶುರಾಮ ರಾಠೋಡ, ಸಿದ್ದೇಶಪ್ಪ ತಳವಾರ, ಶಂಕರಗೌಡ ಮ್ಯಾಗೇರಿ ಇತರರು ಇದ್ದರು.
ಮಲ್ಲನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
೨೭ಎಂಡಿಜಿ೧ ಶಂಕುಸ್ಥಾಪನೆ ಫೋಟೋ ಶೀರ್ಷಿಕೆ: ಮುಂಡರಗಿ ತಾಲೂಕಿನ ಮುರುಡಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾಲವಾಡಗಿ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಸಮಾರಂಭವನ್ನು ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸಿದರು. ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ರವಿ ಕರಿಗಾರ, ಶಕುಂತಲಾ ಪಾಟೀಲ ಇತರರಿದ್ದರು.