ಪೊಲೀಸ್ ಕೆರೆ ಕಣ್ಮರೆ!

lake
Published on

 ಆನೇಕಲ್: ಉಪವಿಭಾಗದ ಅಂದಿನ ಡಿವೈಎಸ್ಪಿ ಎಸ್.ಕೆ. ಉಮೇಶ್ ಮತ್ತು ತಂಡದ ಸಹಕಾರದೊಂದಿಗೆ ಕಾಯಕಲ್ಪ ಕಂಡಿದ್ದ ಹರಪನಹಳ್ಳಿ ಕೆರೆ (ಪೊಲೀಸ್ ಕೆರೆ) ಅಸ್ತಿತ್ವ ಕಳೆದುಕೊಂಡು ಕಣ್ಮರೆಯಾಗುವ ಸ್ಥಿತಿಗೆ ತಲುಪಿದೆ.

ಜಿಗಣಿ ಸಮೀಪದ ಹರಪನಹಳ್ಳಿ ಕೆರೆ ಹತ್ತಾರು ವರ್ಷಗಳಿಂದ ಕಸದಿಂದ ಗಬ್ಬುನಾರುತ್ತಿತ್ತು. ಸುತ್ತಮುತ್ತಲ ವಸತಿ ಬಡಾವಣೆಗಳು ಮತ್ತು ಕೈಗಾರಿಕಾ ಪ್ರದೇಶಗಳಿಂದ ಬರುತ್ತಿದ್ದ ತ್ಯಾಜ್ಯ ಈ ಕೆರೆಗೆ ಸೇರಿ ಕಲುಷಿತಗೊಂಡಿತ್ತು. ಇದನ್ನು ಗಮನಿಸಿದ್ದ ಅಂದಿನ ಡಿವೈಎಸ್ಪಿ 2018ರಲ್ಲಿ ಸ್ಥಳೀಯರ ನೆರವಿನೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದ್ದರು. ಅಂದಿನ ಕೇಂದ್ರ ವಲಯ ಐಜಿಪಿ ದಯಾನಂದ್ ಇದಕ್ಕೆ ಪೊಲೀಸ್ ಕೆರೆ ಎಂದು ನಾಮಕರಣ ಮಾಡಿದ್ದರು. ಬಳಿಕ ಕೆರೆ ನಿರ್ವಹಣೆ ಬಗ್ಗೆ ಯಾರೂ ಗಮನ ನೀಡದ ಪರಿಣಾಮ ಮತ್ತೆ ಕೆರೆ ನೀರು ಮಲಿನಗೊಂಡು ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ.

ಕೆರೆ ನಿರ್ವಹಣೆಗೆ ರೌಡಿಶೀಟರ್ ನೇಮಕ: ಕೆರೆಗೆ ಹೊಸ ರೂಪ ಕೊಟ್ಟು ಉದ್ಘಾಟಿಸಿದ ಬಳಿಕ ಹಾಗೇ ಬಿಡದೆ ಪಟ್ಟಣದ ರೌಡಿಶೀಟರ್ ಆಗಿದ್ದ ಮೀಸೆ ಸುರೇಶ್ ಎಂಬಾತನನ್ನು ಈ ಕೆರೆ ನಿರ್ವಹಣೆಗಾಗಿ ನೇಮಕ ವಾಡಲಾಗಿತ್ತು, ಈತ ಕೆರೆಯಲ್ಲಿ ಮೀನು ಸಾಕಣೆ ವಾಡಿ ತನ್ನ ಜೀವನ ಬದಲಾಯಿಸಿಕೊಂಡು ಕೆರೆಯಲ್ಲಿ ಮೀನು ಹಿಡಿಯುವುದು, ಸ್ವಚ್ಛ ವಾಡುವುದು ವಾಡಿಕೊಂಡು ಬಂದಿದ್ದ. ಬಳಿಕ ಈತ ರೌಡಿಶೀಟರ್ ಪಟ್ಟಿಯಿಂದ ಹೊರಬಂದು ಉತ್ತಮ ವ್ಯಕ್ತಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ. ಮೀಸೆ ಸುರೇಶ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಕಲುಷಿತಗೊಳ್ಳುತ್ತಿದೆ ಹರಪನಹಳ್ಳಿ ಕೆರೆ: ಜಿಗಣಿ ಪೊಲೀಸ್ ಠಾಣೆಗೆ ಬಂದಿದ್ದ ಇನ್‌ಸ್ಪೆಕ್ಟರ್ ವಿಶ್ವನಾಥ್ ಹಾಗೂ ಬಿ.ಕೆ.ಶೇಖರ್ ಕೆರೆಯ ನಿರ್ವಹಣೆಗಾಗಿ ಸುರೇಶ್ ಅವರಿಗೆ ಸಹಕಾರ ಸಹ ನೀಡುತ್ತಾ ಬಂದಿದ್ದರು. ಆದರೆ, ವರ್ಷದಿಂದ ಕೆರೆ ನಿರ್ವಹಣೆ ವಾಡದ ಹಿನ್ನೆಲೆಯಿಂದಾಗಿ ಹಿಂದಿನಂತೆ ಗಿಡಗಂಟಿಗಳು ಬೆಳೆದು ನಿಂತು ಸಂಪೂರ್ಣವಾಗಿ ಕೆರೆ ಕಲುಷಿತವಾಗಿದೆ. ಒಂದು ಭಾಗದಲ್ಲಿ ಕೆರೆಗೆ ಸುತ್ತಮುತ್ತಲ ನಿವಾಸಿಗಳು ಪ್ಲಾಸ್ಟಿಕ್ ವಸ್ತುಗಳನ್ನು ತಂದು ಹಾಕುತ್ತಿದ್ದು ಇನ್ನೊಂದಡೆ ಪಕ್ಕದಲ್ಲಿರುವ ಖಾಸಗಿ ಬಡಾವಣೆಯೊಂದರ ಕಲುಷಿತ ನೀರನ್ನು ನೇರವಾಗಿ ಕೆರೆಗೆ ಹರಿಯಬಿಡಲಾಗುತ್ತಿದೆ.

ಗ್ರಾಪಂ ಆಡಳಿತ ಗಮನಿಸಲಿ: ಹಿಂದಿನ ಇನ್‌ಸ್ಪೆಕ್ಟರ್ ಸಿದ್ದೇಗೌಡ ಅವರ ಅವಧಿಯಲ್ಲಿ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಎಸ್.ಕೆ. ಉಮೇಶ್ ಅವರು ಕರಪನಹಳ್ಳಿ ಕೆರೆಯನ್ನು ಮಾದರಿ ಕೆರೆಯನ್ನಾಗಿಸಿಕೊಂಡಿದ್ದಾರೆ. ಅದೇ ವೇಳೆ ನಾನು ಜಿಗಣಿಗೆ ಇನ್‌ಸ್ಪೆಕ್ಟರ್ ಆಗಿ ಬಂದಿದ್ದು, ಕೆರೆ ನಿರ್ವಹಣೆಗೆ ಸಹಕಾರ ನೀಡಿದ್ದೆ. ಆದರೆ, ನಿರ್ವಹಣೆ ಇಲ್ಲದೆ ಮತ್ತೆ ಹಾಳಾಗುತ್ತಿದೆ. ಗ್ರಾಮ ಪಂಚಾಯಿತಿ ಇತ್ತ ಗಮನಹರಿಸಬೇಕು ಎದು ಜಿಗಣಿ ಇನ್‌ಸ್ಪೆಕ್ಟರ್ ವಿಶ್ವನಾಥ್ ಹೇಳಿದರು.

ಎಸ್ ಕೆ ಉಮೇಶ್ ನಿವತ್ತ ಡಿ ವೈ ಎಸ್ ಪಿ ಜಿಗಣಿ ಕೆರೆಯನ್ನು ತಿಂಗಳಗಟ್ಟಲೆ ಶ್ರಮದಾನ ಮಾಡಿ ಕೆರೆ ಅಭಿವೃದ್ಧಿಪಡಿಸಿದ್ದೆವು. ಬಳಿಕ ಅದಕ್ಕೆ ನಾಮಕರಣವನ್ನು ವಾಡಿ ಸುರೇಶ್ ಎಂಬಾತನನ್ನು ನಿರ್ವಹಣೆಗಾಗಿ ನೇಮಕ ವಾಡಲಾಗಿತ್ತು. ಆದರೆ, ಕೆರೆ ನಿರ್ವಹಣೆ ಇಲ್ಲದೆ ಕಲುಷಿತಗೊಂಡಿದೆ ಎಂಬ ವಿಷಯ ತಿಳಿದು ಬೇಸರವಾಯಿತು. ಸಂಬಂಧಪಟ್ಟ ಅಧಿಕಾರಿಗಳು ಕೆರೆಯನ್ನು ನಿರ್ವಹಣೆ ವಾಡಿ ಅದರ ಅಂದ ಕಾಪಾಡಬೇಕು. ನಾನು ಕೂಡ ಅಧಿಕಾರಿಗಳ ಜತೆ ವಾತನಾಡುತ್ತೇನೆ.

ಎಸ್.ಕೆ.ಉಮೇಶ್, ನಿವೃತ್ತ ಡಿವೈಎಸ್‌ಪಿ

ಹರಪನಹಳ್ಳಿ ಕೆರೆ ಸಂಪೂರ್ಣ ಮಲಿನವಾಗಿ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಜತೆಗೆ ಕೆರೆ ಕಟ್ಟೆಯ ಮೇಲೆ ಆಗಾಗ ಅಪಘಾತಗಳು ಸಂಭವಿಸುತ್ತಿದ್ದವು. ಇದನ್ನು ಮನಗಂಡು ಕೆರೆ ಅಭಿವೃದ್ಧಿ ವಾಡುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ಹಾಕಲಾಗಿತ್ತು. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದರ ನಿರ್ವಹಣೆ ವಾಡಬೇಕೆಂಬುದು ನನ್ನ ಮನವಿ.

ಸಿದ್ದೇಗೌಡ, ಜಿಗಣಿ ಠಾಣೆ ಹಿಂದಿನ ಇನ್‌ಸ್ಪೆಕ್ಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net