

ಮುಂಡಗೋಡ: ತಾಲೂಕಿನ ಬೇಡಸಗಾಂವ ಗ್ರಾಮದಲ್ಲಿ ಭಾನುವಾರ ನಡೆದ ಕೆರೆ ಬೇಟೆಯಲ್ಲಿ ನೂರಾರು ಜನರು ಭಾಗವಹಿಸುವ ಮೂಲಕ ಮೀನುಗಳನ್ನು ಹಿಡಿದುಕೊಂಡು ಹೋದರು.
ಪ್ರತಿವರ್ಷದಂತೆ ಈ ವರ್ಷವೂ ಬೇಡಸಗಾಂವ ಗ್ರಾಮದಲ್ಲಿರುವ ದೊಡ್ಡಕೆರೆಯ ಕೆರೆಬೇಟೆಯನ್ನು ಬೆಳಗ್ಗೆ 11ಗಂಟೆಗೆ ಆರಂಭಿಸಲಾಯಿತು. ಗ್ರಾಮದ ಮಾರಿಕಾಂಬಾ ದೇವಸ್ಥಾನ ಕಟ್ಟಡದ ಸಹಾಯಾರ್ಥ ದೊಡ್ಡಕೆರೆ ಬೇಟೆಗೆ ಬರುವ ಜನರಿಗೆ 300 ರೂ. ನಿಗದಿಪಡಿಸಲಾಗಿತ್ತು. ವಿವಿಧ ತಾಲೂಕುಗಳಿಂದ ಮೀನು ಹಿಡಿಯುವವರು ಆಗಮಿಸಿದ್ದರು. ನೂರಾರು ಜನರು ಕೆರೆಬೇಟೆಯಲ್ಲಿ ಭಾಗವಹಿಸಿ ಮೀನುಗಳನ್ನು ಹಿಡಿದರು.