ಎಮ್ಮೆ, ಎತ್ತು ತೊಳೆಯಲು ಹೋದ ಮಹಿಳೆ, ಯುವಕ ನೀರಿನಲ್ಲಿ ಮುಳಗಿ ಸಾವು

IMG-20230905-WA0020
Published on

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಹಾಗೂ ಕೆರೆಗೆ ಎಮ್ಮೆ ಮೈ ತೊಳೆಯಲು ಹೋದ ಓರ್ವ ಮಹಿಳೆ ಹಾಗೂ ಓರ್ವ ಯುವಕ ಮೃತಪಟ್ಟ ಪ್ರತ್ಯೇಕ ಎರಡು ಘಟನೆ ಜಿಲ್ಲೆಯ ಹಾನಗಲ್ಲ ಹಾಗೂ ರಟ್ಟಿಹಳ್ಳಿಯಲ್ಲಿ ಮಂಗಳವಾರ ಸಂಭವಿಸಿದೆ.
ರಟ್ಟಿಹಳ್ಳಿ ತಾಲೂಕಿನ ಕಡೂರ ಗ್ರಾಮದ ಮಾದೇವಕ್ಕ ಶಿವಪ್ಪ ದೊಡ್ಡಸಿದ್ದಪ್ಪನವರ (38) ಹಾಗೂ ಹಾನಗಲ್ಲ ತಾಲೂಕಿನ ಸಾವಿಕೇರಿಯ ಪ್ರಮೋದ ಮನೋಹರ ಶಕುನವಳ್ಳಿ (17) ಮೃತ ದುರ್ದೈವಿಗಳು.
ಮಾದೇವಕ್ಕ ತಮ್ಮ ಎಮ್ಮೆಗಳನ್ನು ಗ್ರಾಮದ ಬಳಿಯಿರುವ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಬಳಿ ನೀರು ಕುಡಿಸಲು ಹೋದಾಗ ಒಂದು ಎಮ್ಮೆಯ ಕರು ನೀರಿನಲ್ಲಿ ಹೋಗುವುದನ್ನು ನೋಡಿ ಅದರ ಹಗ್ಗ ಹಿಡಿದು ಜಗ್ಗಿದ್ದಾಳೆ. ಆದರೆ, ಎಮ್ಮೆ ಕರು ಮಹಿಳೆಯನ್ನು ನೀರಿನಲ್ಲಿ ಎಳೆದುಕೊಂಡು ಹೋಗಿದೆ. ಇದರಿಂದಾಗಿ ಮಾದೇವಕ್ಕ ನೀರಿನಲ್ಲಿ ಬಿದ್ದು ಮುಳಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮೋದ ತಮ್ಮ ಎತ್ತುಗಳ ಮೈ ತೊಳೆಯಲು ಗ್ರಾಮದ ಬುಕ್ಕಟ್ಟಿ ಕೆರೆಗೆ ಹೋಗಾದ ಮೂರ್ಚೆ ತಪ್ಪಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net