ಕೆರೆ ಒತ್ತುವರಿ ತೆರವಿಗೆ ಆಗ್ರಹ

HRP-MADLIGERI-MAY 29
ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ಮಾಡಲಗೆರೆ ಗ್ರಾಮಸ್ಥರು ಶುಕ್ರವಾರ ಹರಪನಹಳ್ಳಿಯ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಶಿರಸ್ತೇದಾರ್‌ಗೆ ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷ ಟಿ. ವೆಂಕಟೇಶ್, ಮಾಜಿ ಉಪಾಧ್ಯಕ್ಷ ಟಿ. ನಾಗೇಂದ್ರಪ್ಪ, ಪಿ. ಪ್ರಕಾಶ್, ಟಿ. ಮಂಜಪ್ಪ, ಎಚ್. ಕೆಂಚಪ್ಪ ಇತರರಿದ್ದರು.
Published on

ಹರಪನಹಳ್ಳಿ: ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ತಾಲೂಕಿನ ಮಾಡಲಗೆರೆ ಗ್ರಾಮಸ್ಥರು ಶುಕ್ರವಾರ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

121ಎಕರೆ ವಿಸ್ತೀರ್ಣದ ಕೆರೆಯಲ್ಲಿ 110 ಎಕರೆಯನ್ನು ಮಾಡಲಗೆರೆ ತಾಂಡಾ, ಕಗ್ಗಲಕಟ್ಟಿ ತಾಂಡಾದ 20ಜನರು ಸಾಗುವಳಿಗೆ ಒತ್ತುವರಿ ಮಾಡಿದ್ದು ಈಗ 11 ಕರೆ ಮಾತ್ರ ಉಳಿದಿದೆ.

ದನಕರುಗಳಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ರಮ ಕೈಗೊಂಡಿಲ್ಲವೆಂದು ದೂರಿದರು.

ನರೇಗಾ ಕೆಲಸ ಪ್ರಾರಂಭಿಸಿ: ಕೆರೆ ಹೂಳೆತ್ತಲು ನರೇಗಾ ಯೋಜನೆಯಡಿ 6 ಲಕ್ಷ ರೂ. ಮಂಜೂರಾಗಿದೆ. ಕೆರೆ ಆವರಣದಲ್ಲಿ ಒತ್ತುವರಿದಾರರು ಬಿತ್ತನೆ ಮಾಡಿದ್ದರಿಂದ ಹೂಳು ತೆಗೆಯಲಾಗದೆ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಆದಷ್ಟು ಬೇಗ ಕೆಲಸ ಪ್ರಾರಂಭಿಸುವಂತೆ ಮನವಿ ಮಾಡಿದರು.

ಗ್ರಾಮಲೆಕ್ಕಾಧಿಕಾರಿ, ಗ್ರಾಮಸ್ಥರು, ಗ್ರಾಪಂ ಅಧ್ಯಕ್ಷರು,ಸದಸ್ಯರ ಸಮ್ಮುಖದಲ್ಲಿ ಕೆರೆ ಒತ್ತುವರಿದಾರರ ಪಟ್ಟಿ ಸಿದ್ಧಪಡಿಸಿದ್ದು ಒತ್ತುವರಿ ತೆರವು ಮಾಡಿ ಕೆರೆ ಸಂರಕ್ಷಿಸಲು ಕೋರಿದರು.

ಗ್ರಾಪಂ ಅಧ್ಯಕ್ಷ ಟಿ.ವೆಂಕಟೇಶ್, ಮಾಜಿ ಉಪಾಧ್ಯಕ್ಷ ಟಿ.ನಾಗೇಂದ್ರಪ್ಪ, ಪಿ.ಪ್ರಕಾಶ್, ಟಿ.ಮಂಜಪ್ಪ, ಎಚ್.ಕೆಂಚಪ್ಪ, ಆರ್.ವೆಂಕಟೇಶ್, ಎಚ್.ಬಾಲಪ್ಪ, ಎ.ನಾಗಪ್ಪ, ಶಂಭುನಾಥ, ಕೆ.ಹುಚ್ಚಪ್ಪ, ಪಿ.ನಾಗೇಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net