

ರಾಮದುರ್ಗ: ಕೆರೆ ಹೂಳೆತ್ತುವುದರಿಂದ ಅಂತರ್ಜಲ ಹೆಚ್ಚಳವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್.ಆರ್. ಲವಕುಮಾರ ಹೇಳಿದರು.
ತಾಲೂಕಿನ ಹೊಸಕೇರಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಪಂ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಮಾಸ್ತಮ್ಮನ ಕೆರೆ ಹೂಳೆತ್ತುವ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಸಂಸ್ಥೆಯಿಂದ ರಾಜ್ಯದಲ್ಲಿ 1,000ಕ್ಕೂ ಹೆಚ್ಚು ಕೆರೆ ಹೂಳೆತ್ತಲಾಗಿದೆ ಎಂದರು.
ಕೆರೆ ಅಭಿವೃದ್ಧಿ ಸಮಿತಿ ಅಧ್ಯ ಕೀರಪ್ಪ ಬೆಳವಣಿಕಿ, ಒಕ್ಕೂಟದ ಅಧ್ಯ ಉಮೇಶ ಕನಕನ್ನವರ, ಪ್ರಕಾಶ ತಳವಾರ, ಲಿಂಗರಾಜ, ತಾಲೂಕು ಯೋಜನಾಧಿಕಾರಿ ಸಚಿನ, ವಲಯ ಮೇಲ್ವಿಚಾರಕ ಕೇಶವ, ಕೃಷಿ ಅಧಿಕಾರಿ ಪ್ರದಿಪ ಇತರರಿದ್ದರು.