ಕೆರೆ ಅಭಿವೃದ್ಧಿಯೋ..? ಇಂಜಿನಿಯರ್ ಅಭಿವೃದ್ಧಿಯೋ..?

11 koppa protest
ಕೊಪ್ಪದ ವಡ್ಡನಮಕ್ಕಿ ಕೆರೆ ಸಮೀಪ ಅಳವಡಿಸಿರುವ ಬ್ಯಾನರ್
Published on

ಕೊಪ್ಪ: ತಾಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣವಂತೆ ಗ್ರಾಮದ ವಡ್ಡನಮಕ್ಕಿ ಕೆರೆಯಲ್ಲಿ ಸಮರ್ಪಕವಾಗಿ ಹೂಳು ತೆಗೆಯದೇ ಅವ್ಯವಹಾರ ನಡೆಸಲಾಗಿದೆ ಎಂದು ಕೆರೆ ಸಮೀಪ ಬ್ಯಾನರ್ ಅಳವಡಿಸಲಾಗಿದೆ.
ಕೆರೆ ಅಭಿವೃದ್ಧಿಯೋ..? ಇಂಜಿನಿಯರ್ ಅಭಿವೃದ್ಧಿಯೋ..? ಎಂದು ಬ್ಯಾನರ್‌ನಲ್ಲಿ ಪ್ರಶ್ನಿಸಿದ್ದು, ಹೂಳು ತೆಗೆಯುವ ಕಾಮಗಾರಿ ಹೆಸರಲ್ಲಿ 3,79,384 ರೂ. ಬಿಲ್ ಮಾಡಲಾಗಿದೆ. ಕನಿಷ್ಠ 60 ಸಾವಿರ ರೂ. ವೆಚ್ಚದ ಕೆಲಸವೂ ನಡೆದಿಲ್ಲ. ಪ್ರಜ್ಞಾವಂತ ಊರಿನ ಹಿರಿಯರು, ಚುನಾಯಿತ ಪ್ರತಿನಿಧಿಗಳು ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಹೂಳು ತೆಗೆಯಲು ಕೊಪ್ಪದ ಬಾಳಗಡಿಯಲ್ಲಿನ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಕಚೇರಿಯಲ್ಲಿನ ಇಂಜಿನಿಯರ್ ನೀಡಿದ ಭರವಸೆ ನಂಬಿ ಗ್ರಾಮದ ಜನರಿಗೆ ಉತ್ತಮ ನೀರು ಕೊಡಲು ಒಪ್ಪಿಕೊಂಡೆ. ಆದರೆ, ಬಿಲ್ ಮಾಡಿ ಹಣ ಪಡೆದಿದ್ದಾನೆ. ಇದರಿಂದ ನನಗೆ ನನ್ನ ಗ್ರಾಮದ ಜನರಿಗೆ ಅನ್ಯಾಯವಾಗಿದೆ ಎಂಬುದಾಗಿ ವಡ್ಡನಮಕ್ಕಿ ಕೆರೆಯೇ ಪ್ರಶ್ನಿಸುತ್ತಿರುವಂತೆ ಬ್ಯಾನರ್ ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net