ಕೆರೆ ಸಂರಕ್ಷಣೆ ಹೊಣೆ ನಮ್ಮೆಲ್ಲರದ್ದು

ಅರಕಲಗೂಡು ತಾ. ಮುದ್ದನಹಳ್ಳಿಯ ಮರಳಕಟ್ಟೆ ಕೆರೆ ಭರ್ತಿಯಾಗಿರುವುದರಿಂದ ಜೆಡಿಎಸ್ ಮುಖಂಡ ಎಂ.ಎಸ್. ರಮೇಶ್ ನೇತೃತ್ವದಲ್ಲಿ ಭಾನುವಾರ ಬಾಗಿನ ಸಲ್ಲಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಎಂ.ಎಸ್. ಯೋಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್. ಶಿವರಾಮ, ಮುಖಂಡರಾದ ಎಂ. ಲಕ್ಷ್ಮಣಗೌಡ, ಸುಶೀಲಮ್ಮ, ನಿವೃತ್ತ ಪೊಲೀಸ್ ಕೃಷ್ಣೇಗೌಡ, ವಕೀಲ ಗಿರೀಶ್ ಮುದ್ದನಹಳ್ಳಿ, ಎಂ.ಕೆ. ರಘು, ಎಂ.ಸಿ.ಅರುಣ್ ಕುಮಾರ್, ಎಂ.ನಂಜುಂಡೇಗೌಡ, ಎಂ.ಎನ್. ಪ್ರಮೋದ್ ಕುಮಾರ್, ಹೆಬ್ಬಾಲೆ ಚಂದ್ರು ಇದ್ದರು.

Published on

ಅರಕಲಗೂಡು: ಜನ ಜಾನುವಾರುಗಳ ಜೀವನಕ್ಕೆ ಆಧಾರವಾಗಿರುವ ಕೆರೆಗಳನ್ನು ಸಂರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಾಲೂಕು ಜೆಡಿಎಸ್ ಮುಖಂಡ ಎಂ.ಎಸ್.ರಮೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಕಸಬಾ ಹೋಬಳಿ ಮುದ್ದನಹಳ್ಳಿಯ ಮರಳಕಟ್ಟೆ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಭಾನುವಾರ ಗಂಗಾರತಿ ಮಾಡಿ, ಬಾಗಿನ ಸಲ್ಲಿಸಿ ಮಾತನಾಡಿದ ಅವರು, ಕೆರೆ ಭರ್ತಿಯಾಗುವುದು ಶುಭ ಸಂಕೇತ ಎಂದು ಬಣ್ಣಿಸಿದರು.

ಇತ್ತೀಚಿನ ದಿನಗಳಲ್ಲಿ ಕೆಲವರಲ್ಲಿ ಭೂಮಿಯ ಬಾಕತನ ಹೆಚ್ಚುತ್ತಿದೆ. ಇದರಿಂದಾಗಿ ಕೆರೆ ಒತ್ತುವರಿ ಪ್ರಮಾಣವೂ ಏರುತ್ತಿದೆ. ಪರಿಣಾಮ ಕೆರೆಗಳ ವಿಸ್ತೀರ್ಣ ಕುಗ್ಗುತ್ತಿದೆ. ಜನರೇ ಸ್ವಯಂ ಪ್ರೇರಿತರಾಗಿ ಎಚ್ಚೆತ್ತುಕೊಳ್ಳುವ ಮೂಲಕ ಭೂ ಬಾಕರಗೆ ಕಡಿವಾಣ ಹಾಕಬೇಕು. ಆ ಮೂಲಕ ಕೆರೆಗಳ ಸರಕ್ಷಣೆಗೆ ಮುಂದಾಗಬೇಕು ಎಂದರು.

ಕಸಬಾ ಹೋಬಳಿ ವ್ಯಾಪ್ತಿಯ ಪ್ರಮುಖ ಗ್ರಾಮಗಳಾದ ಮುದ್ದನಹಳ್ಳಿ, ಹೆತ್ತಗೌಡನಹಳ್ಳಿ, ಸಿದ್ದೇಗೌಡನ ಕೊಪ್ಪಲು ಮತ್ತು ಕೇಶವಾಪುರ ಗ್ರಾಮಗಳ ಜೀವನಾಡಿಯಾಗಿರುವ ಮರಳಕಟ್ಟೆ ಕೆರೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜುಲೈ ಕೊನೆಯ ವಾರದಲ್ಲಿ ಭರ್ತಿಯಾಗಿ ಗಮನ ಸೆಳೆದಿದೆ. ಮೇಲಾಗಿ ಈ ಭಾಗದಲ್ಲಿ ಅಂತರ್ಜಲ ವೃದ್ಧಿಗೂ ಈ ಕೆರೆ ದೊಡ್ಡ ಕೊಡುಗೆ ನೀಡಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್.ಯೋಗೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್.ಶಿವರಾಮ, ಮುಖಂಡರಾದ ಎಂ. ಲಕ್ಷ್ಮಣಗೌಡ, ಸುಶೀಲಮ್ಮ, ನಿವೃತ್ತ ಪೊಲೀಸ್ ಕೃಷ್ಣೇಗೌಡ, ವಕೀಲ ಗಿರೀಶ್ ಮುದ್ದನಹಳ್ಳಿ, ಎಂ.ಕೆ. ರಘು, ಎಂ.ಸಿ.ಅರುಣ್ ಕುಮಾರ್, ಎಂ. ನಂಜುಂಡೇಗೌಡ, ಎಂ.ಎನ್.ಪ್ರಮೋದ್ ಕುಮಾರ್, ಹೆಬ್ಬಾಲೆ ಚಂದ್ರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net