ಕೆರೆಗೆ ಬಾಗಿನ ಅರ್ಪಣೆ

29Khanapur2-Web
ಖಾನಾಪುರ ತಾಲೂಕಿನ ಚಿಕ್ಕ ಅಂಗ್ರೊಳ್ಳಿ ಗ್ರಾಮದ ದೊಡ್ಡ ಕೆರೆಗೆ ರೈತ ಸಂಘಟನೆ ಪದಾಧಿಕಾರಿಗಳು, ಸ್ಥಳೀಯರು ಬಾಗಿನ ಅರ್ಪಿಸಿದರು.
Published on

ಖಾನಾಪುರ: ತಾಲೂಕಿನ ಚಿಕ್ಕ ಅಂಗ್ರೊಳ್ಳಿ ಗ್ರಾಮದ ದೊಡ್ಡ ಕೆರೆ 28 ವರ್ಷಗಳ ಬಳಿಕ ಈ ವರ್ಷ ಸಂಪೂರ್ಣವಾಗಿ ತುಂಬಿದ್ದರಿಂದ ಗ್ರಾಮದ ಕೆರೆ ಆವರಣದಲ್ಲಿ ಶನಿವಾರ ರೈತ ಸಂಘ, ಕೃಷಿಕ ಸಮಾಜ, ಹಸಿರು ಸೇನೆ ಹಾಗೂ ಗ್ರಾಮಸ್ಥರಿಂದ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಲಾಯಿತು. ರೈತ ಸಂಘ ಹಾಗೂ ಕೃಷಿಕ ಸಮಾಜದ ಮುಖಂಡ ಅಶೋಕ ಯಮಕನಮರಡಿ ಮಾತನಾಡಿ, ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಮುತುವರ್ಜಿ ವಹಿಸಿ ಕೆರೆ ಸಂರಕ್ಷಣೆ ಮಾಡಿದ್ದರಿಂದ ಮಳೆಗಾಲದಲ್ಲಿ ನೀರಿನಿಂದ ಮೈದುಂಬಿಕೊಂಡಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರು ಕೆರೆಗೆ ಶಾಸ್ತ್ರೋಕ್ತ ಪದ್ಧತಿಯಂತೆ ಪೂಜೆ ನೆರವೇರಿಸಿದರು. ಕಲ್ಮೇಶ ತಳವಾರ, ಕೇದಾರಲಿಂಗ ಸಂಭೋಜಿ, ರಾಮಣ್ಣ ಕಿತ್ತೂರ, ಬಾಬು ಕಿತ್ತೂರ, ಬಸವರಾಜ ಬುಡ್ಡವ್ವಗೋಳ, ಮಂಜುನಾಥ ಅಂಕಲಗಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net