ಕೆರೆಯ ಪಾಚಿ ತೆರವುಗೊಳಿಸಿದ ಕಾರ್ಮಿಕರು

Sirguppa Kere
ಮೈಲಾಪುರ ಕ್ಯಾಂಪ್‌ನಲ್ಲಿರುವ ಕುಡಿವ ನೀರಿನ ಕೆರೆಯಲ್ಲಿ ಪಾಚಿ ತೆಗೆಯುತ್ತಿರುವ ಕಾರ್ಮಿಕರು.
Published on

ಸಿರಗುಪ್ಪ: ತಾಲೂಕಿನ ಬಲಕುಂದಿ ಗ್ರಾಪಂ ವ್ಯಾಪ್ತಿಯ ಮೈಲಾಪುರ ಕ್ಯಾಂಪ್‌ನಲ್ಲಿರುವ ಕುಡಿವ ನೀರಿನ ಕೆರೆಯ ಪಾಚಿಯನ್ನು ಶನಿವಾರ ಸ್ಥಳೀಯ ಕಾರ್ಮಿಕರು ತೆರವುಗೊಳಿಸಿದರು.

ಸುಮಾರು 100 ಮನೆಗಳನ್ನು ಹೊಂದಿರುವ ಗ್ರಾಮಕ್ಕೆ ಕುಡಿವ ನೀರು ಪೂರೈಸುವ ಉದ್ದೇಶದಿಂದ ಕೆರೆ ನಿರ್ಮಿಸಲಾಗಿದೆ. ಕೆರೆಯಲ್ಲಿ ಸಂಗ್ರಹವಾಗುವ ನೀರು ಮೂರು ತಿಂಗಳವರೆಗೆ ಬಳಸಬಹುದು. ಮಾರ್ಚ್‌ನಲ್ಲಿ ಕಾಲುವೆಗೆ ನೀರು ಬಿಟ್ಟ ಸಂದರ್ಭದಲ್ಲಿ ಕೆರೆ ತುಂಬಿಸಲಾಗಿತ್ತು. ಆದರೆ, ಹಸಿರು ಪಾಚಿಗಟ್ಟಿದ್ದರಿಂದ ಗ್ರಾಮಸ್ಥರು ಬಳಕೆ ಮಾಡದೆ ಬಲಕುಂದಿಗೆ ತೆರಳಿ ಶುದ್ಧ ನೀರನ್ನು ತಂದುಕೊಳ್ಳುವಂತಾಗಿತ್ತು. ಹೀಗಾಗಿ ಗ್ರಾಮಸ್ಥರು ಪಾಚಿ ತೆಗೆಯಬೇಕೆಂದು ಮನವಿ ಸಲ್ಲಿಸಿದ್ದರಿಂದ ಗ್ರಾಪಂ ತೆರವಿಗೆ ಮುಂದಾಗಿದೆ.

ಮೈಲಾಪುರ ಕ್ಯಾಂಪ್‌ನಲ್ಲಿರುವ ಕೆರೆಯ ನೀರು ಪಾಚಿಗಟ್ಟಿರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದರು. ತಕ್ಷಣವೇ ಕೆರೆಯಲ್ಲಿ ಸಂಗ್ರಹವಾಗಿರುವ ಪಾಚಿ ತೆಗೆಯಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಿಡಿಒ ಈರಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net