ಯೋಗ, ಧ್ಯಾನ ಮಾಡಿ: ಕೈದಿಗಳಿ ನ್ಯಾಯಮೂರ್ತಿ ವೀರಪ್ಪ ನೈತಿಕತೆ ಪಾಠ

oppo_2
oppo_2
Published on

ಕಲಬುರಗಿ: ಜೈಲು ಶಿಕ್ಷೆಯಲ್ಲ, ಪರಿವರ್ತನೆಯ ಕೇಂದ್ರವಾಗಿದೆ. ಬೆಳಗ್ಗೆ ಬೇಗ ಎದ್ದು ಯೋಗ, ಧ್ಯಾನ ಮಾಡಿ ಎಂದು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಸಲಹೆ ನೀಡಿದರು.

ಬೆಳಗ್ಗೆ ಶನಿವಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಖೈದಿಗಳೊಂದಿಗೆ ಮಾತುಕತೆ ನಡೆಸಿದರು.

ಯಾವುದೋ ತಪ್ಪು ಮಾಡಿ ಬಂದಿರ್ತೀರಿ. ಬದಲಾವಣೆ ಮಾಡಿಕೊಳ್ಳಿ. ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಿ. ಹೊರಗಡೆ ಬಂದಾಗ ಉತ್ತಮ ವ್ಯಕ್ತಿಗಳಾಗಿ ಬನ್ನಿ. ಆಗ ಶಿಕ್ಷೆಗೆ ಪ್ರಾಯಶ್ಚಿತ್ತ ಆಗುತ್ತೆ ಎಂದು ಹೇಳಿದರು.

ಕಮೀಷನರ್ ಡಾ.ಶರಣಪ್ಪ ಎಸ್.ಡಿ., ಎಸ್ ಪಿ ಶ್ರೀನಿವಾಸಲು ಅಡ್ಡೂರಲು, ನ್ಯಾಯಾಧೀಶ ಶ್ರೀನಿವಾಸ ನವಲೆ, ಜೈಲ್ ಸೂಪರೆಂಟೇಡ್ ಅನಿತಾ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net