ದೇವರ ಪೂಜೆ ಯಾವತ್ತೂ ಭಕ್ತರಿಗೋಸ್ಕರ : ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಆಶೀರ್ವಚನ

bheti
ಲಾಯಿಲ ಶ್ರೀ ರಾಘವೇಂದ್ರ ಮಠಕ್ಕೆ ಉಡುಪಿ ಶ್ರೀ ಶಿರೂರು ಸ್ವಾಮೀಜಿ ಭೇಟಿ ನೀಡಿದರು. ದಯಾಕರ ಭಟ್ ಕುತ್ಯಾರು, ಶೀರೂರು ಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್, ಗುರುಗಳಾದ ವಿದ್ವಾನ್ ಅಕ್ಷಯ ಆಚಾರ್, ಕಾರ್ಯದರ್ಶಿ ರಾಮಣ್ಣ ಉಪಸ್ಥಿತರಿದ್ದರು.
Published on

ಬೆಳ್ತಂಗಡಿ: ಪೂಜೆ ದೇವರನ್ನು ಒಲಿಸಿಕೊಳ್ಳುವ ಸುಲಭ ಮಾರ್ಗ. ಪೂಜೆಯಿಂದ ನಮ್ಮ ಇಷ್ಟಾರ್ಥ ಸಿದ್ಧಿಯಾಗುವುದು. ತುಪ್ಪದಿಂದ ಹೋಮ ಹವನಾದಿಗಳನ್ನು ಮಾಡುತ್ತೇವೆ. ಹೋಮ ಹವನಾದಿಗಳು ನಮ್ಮ ಸ್ವಾರ್ಥಕ್ಕಾಗಿಯಲ್ಲ. ಧರ್ಮ ಕರ್ಮಗಳು ನಮಗಾಗಿಯಲ್ಲ. ಅದು ಸಮಸ್ತರ ಏಳಿಗೆಗಾಗಿ. ಭಕ್ತಿಯಿಂದ ಧರ್ಮ ಕರ್ಮ ಮಾಡಿದರೆ ಇಡೀ ರಾಷ್ಟ್ರಕ್ಕೆ ಒಳಿತಾಗುವುದು. ನಾವು ದೇವರ ಪೂಜೆ ಮಾಡುವುದು ಯಾವತ್ತೂ ಭಕ್ತರಿಗೋಸ್ಕರ ಎಂದು ಉಡುಪಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಹೇಳಿದರು.

ಶುಕ್ರವಾರ ಬೆಳ್ತಂಗಡಿ ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ತಮ್ಮ ಪಟ್ಟದ ದೇವರಾದ ಶ್ರೀ ವಿಠ್ಠಲ ದೇವರ ಸಂಸ್ಥಾನ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಶ್ರೀ ರಾಘವೇಂದ್ರ ಸ್ವಾಮಿ ಮತ್ತು ಮುಖ್ಯಪ್ರಾಣ ದೇವರು ಪರಮಾತ್ಮನ ಪರಮ ಭಕ್ತರು. ಪರಮಾತ್ಮನ ಆರಾಧನೆಯನ್ನು ರಾಘವೇಂದ್ರ ಸ್ವಾಮಿಗಳಿಂದ ಕಲಿಯಬೇಕು. ಇಲ್ಲಿ ಅವರೀರ್ವರ ಸಾನ್ನಿಧ್ಯವಿದ್ದು ಭಕ್ತರನ್ನು ಸದಾ ಅನುಗ್ರಹಿಸಲಿ. 2026 ಜನವರಿಯಿಂದ 2 ವರ್ಷ ಕಾಲ ಉಡುಪಿಯಲ್ಲಿ ತಮ್ಮ ಶ್ರೀ ಕೃಷ್ಣ ಪೂಜಾ ಪ್ರಥಮ ಪರ್ಯಾಯ ನಡೆಯಲಿದೆ ಎಂದರು.

ಶ್ರೀ ರಾಘವೇಂದ್ರ ಮಠದ ಅರ್ಚಕ ರಾಘವೇಂದ್ರ ಭಾಂಗಿಣ್ಣಾಯ ದಂಪತಿ ಶ್ರೀಗಳವರಿಗೆ ಮಾಲಿಕೆ ಮಂಗಳಾರತಿ ನೆರವೇರಿಸಿ, ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಪೀತಾಂಬರ ಹೆರಾಜೆ ಶ್ರೀಗಳವರನ್ನು ಗೌರವಿಸಿದರು.

ದಯಾಕರ ಭಟ್ ಕುತ್ಯಾರು, ಶೀರೂರು ಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್, ಗುರುಗಳಾದ ವಿದ್ವಾನ್ ಅಕ್ಷಯ ಆಚಾರ್, ಕಾರ್ಯದರ್ಶಿ ರಾಮಣ್ಣ ಉಪಸ್ಥಿತರಿದ್ದರು.

ಕ್ಷೇತ್ರದ ಭಕ್ತ, ದಾನಿ ನಾರಾಯಣ ಬೇಗೂರು ಅವರನ್ನು ಶ್ರೀಗಳು ಗೌರವಿಸಿದರು. ಟ್ರಸ್ಟಿಗಳಾದ ವಸಂತ ಸುವರ್ಣ, ಶಂಕರ ಹೆಗ್ಡೆ, ಸೋಮೇ ಗೌಡ, ಮಹಾಬಲ ಶೆಟ್ಟಿ, ಜಯರಾಮ ಬಂಗೇರ, ಕೃಷ್ಣ ಶೆಟ್ಟಿ, ಸುರೇಶ ಶೆಟ್ಟಿ ಭಾಗವಹಿಸಿದ್ದರು. ಸುರೇಶ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net