ಹಿರೇಕೆರೂರ: ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಹಳೆನಿಡನೇಗಿಲು ಗ್ರಾಮದಲ್ಲಿ ಸೋಮವಾರ ನಡೆದಿದೆ..ಚೌಡಮ್ಮ ಬೀರಪ್ಪ ಕುರಿಯವರ (60) ಮೃತ ಮಹಿಳೆ..ಇವರು ಗೋವಿನಜೋಳದ ಸೊಪ್ಪೆ ಹಾಕುತ್ತಿದ್ದ ಸಮಯದಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.