ಭಾರತೀಯ ತತ್ವಶಾಸ್ತ್ರದಲ್ಲಿ ವೇದ ವಾಙ್ಮಯಕ್ಕಿಂತ ಮಿಗಿಲಾದ ಶಾಸ್ತ್ರವಿಲ್ಲ ‘ಲಘು ಶಾಕಲಮ್’ ಬಿಡುಗಡೆಗೊಳಿಸಿ ದೇರೆಬೈಲು ಡಾ.ಶಿವಪ್ರಸಾದ್ ತಂತ್ರಿ ಅಭಿಮತ

mng--19 sep lagu shakulam
Published on

ಮಂಗಳೂರು: ವೇದದಲ್ಲಿ ಬದುಕಿನಲ್ಲಿ ಅತ್ಯುತ್ತಮವಾಗಿ ನಡೆದುಕೊಳ್ಳಬೇಕಾದ ರೀತಿಗಳನ್ನು ತಿಳಿಸಿದೆ. ಮಂತ್ರ,ಬ್ರಾಹ್ಮಣ್ಯಗಳು,ಉಪನಿಷತ್ತುಗಳು,ಇವುಗಳೆಲ್ಲವೂ ನಮ್ಮ ಸನಾತನ ಧರ್ಮವನ್ನು ಶ್ರೀಮಂತಗೊಳಿಸಿವೆ ಎಂದು ದೇರೆಬೈಲು ಡಾ.ಶಿವಪ್ರಸಾದ್ ತಂತ್ರಿ ಹೇಳಿದರು.


ಕದ್ರಿ ಕಂಬಳ ರಸ್ತೆಯ ಮಂಜುಪ್ರಾಸಾದದ ವಾದಿರಾಜ ಮಂಟಪದಲ್ಲಿ ಚತುರ್ವೇದ ವಿದ್ವಾಂಸ ಡಾ.ಪ್ರಭಾಕರ ಅಡಿಗರು ರಚಿಸಿರುವ ಕೃತಿ ‘ಲಘು ಶಾಕಲಮ್’ ಬಿಡುಗಡೆಗೈದು ಮಾತನಾಡಿದರು.


ಈಗಾಗಲೇ 15 ಆಧ್ಯಾತ್ಮಿಕ ಕೃತಿಗಳನ್ನು ಬರೆದಿರುವ ಡಾ.ಪ್ರಭಾಕರ ಅಡಿಗರು ತಮ್ಮ ನೂತನ ಕೃತಿ ‘ಲಘು ಶಾಕಲಮ್’ ನ ಪರಿಚಯ ಮಾಡಿದರು. ಪುಸ್ತಕ ಪ್ರಕಾಶನದ ಹೊಣೆ ಹೊತ್ತ ವಿದ್ವಾನ್ ಹರಿಪ್ರಸಾದ್ ಭಟ್ ಹಾಗೂ ಬಿಡುಗಡೆಗೆ ಸಂಪೂರ್ಣ ಸಹಕಾರ ನೀಡಿರುವ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಅವರಿಗೆ ಕೃತಜ್ಞತೆ ಸಲ್ಲಿಸಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಪ್ರದೀಪ ಕುಮಾರ ಕಲ್ಕೂರ, ಇಂದಿನ ಜಟಿಲ ವಿದ್ಯಮಾನಗಳ ನಡುವೆಯೂ ಇಂತಹ ಆಧ್ಯಾತ್ಮಿಕ ಕೃತಿಗಳು ಬೆಳಕು ಕಾಣುತ್ತಿರುವುದು ನಿಜಕ್ಕೂ ಸಂತಸದ ಸಂಗತಿ, ಡಾ.ಪ್ರಭಾಕರ ಅಡಿಗರಿಂದ ಇನ್ನಷ್ಟು ಯೋಗ್ಯ ಕೃತಿಗಳು ಪ್ರಕಟವಾಗಲೆಂದು ಹಾರೈಸಿದರು.


ಈ ಸಂದರ್ಭ ಬೆಳ್ಮಣ್ ಶ್ರೀ ದುರ್ಗಾ ಪರಮೇಶ್ವರಿ ದೇವಳದ ಅರ್ಚಕ ಬಿ.ಶ್ರೀಧರ ಭಟ್, ವಿದ್ವಾನ್ ಮುರಳೀ ತಂತ್ರಿ ಬೈಲೂರು, ಪ್ರೊ.ಎಂ.ಬಿ.ಪುರಾಣಿಕ್, ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಪ್ರಸಂಗ ಕರ್ತ ಪೊಳಲಿ ನಿತ್ಯಾನಂದ ಕಾರಂತ ಮೊದಲಾದವರು ಉಪಸ್ಥಿತರಿದ್ದರು.


ಚೈತ್ರಾ ಶ್ರೇಯಸ್ ರಾವ್, ವರ್ಷಾ ಅಡಿಗ ಹಾಗೂ ಮಂಜುಶ್ರೀ ಬಳಗ ಕದ್ರಿ ಇವರಿಂದ ಭಜನೆ, ಕೃಷ್ಣ ಪವನ್ ಕುಮಾರ್ ಬಳಗದಿಂದ ವೇದಘೋಷ ನಡೆಯಿತು. ಶ್ರೀ ಕ್ಷೇತ್ರ ಕದ್ರಿಯ ಅರ್ಚಕ ಕೃಷ್ಣ ಅಡಿಗ ಸ್ವಾಗತಿಸಿದರು. ವಿದ್ವಾನ್ ಹರಿಪ್ರಸಾದ್ ಭಟ್ ಕೊಟ್ಟಾರ ವಂದಿಸಿದರು, ಸುಧಾಕರ ರಾವ್ ಪೇಜಾವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net