

ಮಂಗಳೂರು: ನಗರದ ಲೇಡಿಹಿಲ್ ವೃತ್ತಕ್ಕೆ ಬಜರಂಗದಳ ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಬ್ಯಾನರ್ ಅಳವಡಿಸಿದೆ.
ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಹಲವು ಸಂಘಟನೆಗಳು ಒತ್ತಾಯ ಮಾಡಿವೆ. ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಇತ್ತೀಚಿಗೆ ಶೀಘ್ರ ನಾಮಕರಣ ಮಾಡುವ ಬಗ್ಗೆ ಹೇಳಿಕೆ ನೀಡಿದ್ದರು. ಪಾಲಿಕೆ ಅಧಿಕೃತವಾಗಿ ನಾಮಕರಣ ಮಾಡುವ ಮೊದಲೇ ಬಜರಂಗದಳ ಬ್ಯಾನರ್ ಅಳವಡಿಸಿದೆ.