ಮದುವೆಗೆ ತೆರಳಿದ ಯುವತಿ ನಾಪತ್ತೆ

missing 21
Published on


ಮಂಗಳೂರು: ಮದುವೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ರಾಬಿಯಾ ಪರ್ವೀನ್ (22) ನಾಪತ್ತೆಯಾದವರು. ಇವರು ನಗರದ ಲೇಡಿಗೋಶನ್ ಎದುರಿನ ಕಟ್ಟಡದಲ್ಲಿ ಟೈಲರಿಂಗ್ ಮೆಶಿನ್‌ನ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಸುಮಾರು 8 ತಿಂಗಳುಗಳಿಂದ ಕೆಲಸ ಮಾಡಿಕೊಂಡಿದ್ದರು. ಜು.18ರಂದು ಸಂಜೆ ಬಂದರಿನಲ್ಲಿರುವ ಸ್ನೇಹಿತರ ಮದುವೆಗೆ ಹೋಗಿ ಬರುವುದಾಗಿ ಹೋದವರು ನಾಪತ್ತೆಯಾಗಿದ್ದಾರೆ. ಮನೆಯವರು ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿದೆ. ಆಕೆಯನ್ನು ಪತ್ತೆ ಮಾಡಿ ಕೊಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net