

ಅಂಗನವಾಡಿ ಕಾರ್ಯಕರ್ತೆ ಶವವಾಗಿ ಪತ್ತೆ
ಬೆಳಗಾವಿ : ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯ ತಿನೈಘಾಟ್ ಬಳಿಯ ಸೇತುವೆ ಕೆಳಗಿಜ ನೀರಿನಲ್ಲಿ ಭಾನುವಾರ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಖಾನಾಪುರ ತಾಲೂಕಿನ ನಂದಗಡದ ದುರ್ಗಾ ನಗರದ ಅಶ್ವಿನಿ ಬಾಬುರಾವ್ ಪಾಟೀಲ(50) ಮೃತ ಮಹಿಳೆ ಎಂದು ಗುರುತಿಸಲಾಗಿದೆ.. ಅಂಗನವಾಡಿ ಕಾರ್ಯಕರ್ತೆಯಾಗಿರುವ ಅಶ್ವಿನಿ ಅ. 2 ರಂದು ಅಶ್ವಿನಿ ಕಕ್ಕೇರಿ ಜಾತ್ರೆಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಜಾತ್ರೆಯಿಂದ ವಾಪಾಸ್ ಆಗುವಾಗ ಅಶ್ವಿನಿ ಬೀಡಿ ಗ್ರಾಮದಲ್ಲಿ ಇಳಿದಿದ್ದ ಅವರು, ಸ್ವಲ್ಪ ಕೆಲಸ ಇದೆ ಎಂದು ಹೇಳಿದ್ದರು. ಆದರೆ ಮನೆಗೂ ಬಂದಿರಲಿಲ್ಲ.
ಹೀಗಾಗಿ ಅಶ್ವಿನಿ ಮಗ ಮಾರನೆ ದಿನ ನಂದಗಡ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ವಾಹನವೊಂದರ ಚಾಲಕ ತಿನೈಘಾಟ್ ನ ಸೇತುವೆ ಕೆಳಗೆ ನೀರಿನಲ್ಲಿ ಮಹಿಳೆಯೊಬ್ಬರ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯ ಮೃತದೇಹ ಮೇಲಕ್ಕೆತ್ತಿದ್ದಾರೆ. ಮೃತದೇಹದ ಪಕ್ಕದಲ್ಲಿದ್ದ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಅಶ್ವಿನಿ ಅವರದ್ದು ಕೊಲೆಯೋ? ಆತ್ಮಹತ್ಯೆಯೋ? ಆಕಸ್ಮಿಕ ಅಪಘಾತವೋ? ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದ್ದು, ಮನೆಯವರಿಗೆ ಅಶ್ವಿನಿ ಮೊಬೈಲ್‌ನಿಂದ ಬೆಂಗಳೂರಿಗೆ ಹೋಗುವುದಾಗಿ ಮಸೇಜ್ ಮಾಡಿದ್ದು, ಮತ್ತೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದೂ ಮೆಸೇಜ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ಶುರುವಾಗಿದೆ