

ವಾಡಿ: ಲಾಡ್ಲಾಪುರದ ಹಾಜಿಸರ್ವರ್ ದರ್ಗಾದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, ಸುಮಾರು 6.98 ಲಕ್ಷ ರೂ. ಸಂಗ್ರಹವಾಗಿದೆ ಎಂದು ದರ್ಗಾದ ಪ್ರಮುಖರು ತಿಳಿಸಿದ್ದಾರೆ.
ಕಳೆದ 18 ತಿಂಗಳುಗಳಲ್ಲಿ ಜರುಗಿದ 2 ಜಾತ್ರೆ, ಅಮವಾಸ್ಯೆ ಹಾಗೂ ಪ್ರತಿ ಗುರುವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಅಲ್ಲದೆ ಕೋವಿಡ್‌ನಿಂದಾಗಿ ಜಾತ್ರೆ ವೇಳೆ ವ್ಯಾಪರಸ್ಥರಿಗೆ ಟೆಂಡರ್‌ನಿAದ ವಿನಾಯಿತಿ ನೀಡಿ, ನಿಮಗೆ ತಿಳಿದಷ್ಟು ಹುಂಡಿಗೆ ಹಣ ಹಾಕುವಂತೆ ಹೇಳಲಾಗಿತ್ತು. ಹುಂಡಿ ಭರ್ತಿಯಾಗಿದ್ದು, ದರ್ಗಾದ ಆವರಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಸುಮಾರು 3 ಗಂಟೆಗೂ ಅಧಿಕ ಕಾಲ ಎಣಿಕೆ ಕಾರ್ಯ ನಡೆಯಿತು. 6,98,500 ರೂ.ಗಳು ಸಂಗ್ರಹವಾಗಿದ್ದು, ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ದರ್ಗಾದ ಅಭಿವೃದ್ಧಿ ಹಣ ವಿನಿಯೋಗಿಸಲಾಗುವುದು ಎಂದು ಹೇಳಿದ್ದಾರೆ.