ಮಹಿಳೆಯರೇ, ರಕ್ತದಾನಕ್ಕೆ ಕೈಜೋಡಿಸಿ: ಡಾ. ರಾಜನಂದಿನಿ ಕಾಗೋಡು

16sgr5
ಸಾಗರದ ರೋಟರಿ ರಕ್ತನಿಽ ಕೆಂದ್ರದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಿAದ ಅಖಂಡ ಭಾರತ ಸಂಕಲ್ಪ ದಿವಸ್ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಸಂಸ್ಥೆ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಪ್ರಮಾಣಪತ್ರ ನೀಡಿದರು. ರವೀಂದ್ರನಾಥ್, ಸಂತೋಷ್, ಪುಷ್ಪಾ ಪೈ ಇತರರಿದ್ದರು.
Published on

ಸಾಗರ: ರಕ್ತದಾನ ಮಾಡಲು ಮಹಿಳೆಯರೂ ಮುಂದೆ ಬರಬೇಕು. ರಕ್ತದಾನ ಮಾಡುವುದರಿಂದ ಇನ್ನೊಬ್ಬರಿಗೆ ಸಹಾಯ ಆಗುವುದಲ್ಲದೆ ನಮ್ಮ ಆರೋಗ್ಯವೂ ಸುಧಾರಿಸುತ್ತದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.

ನಗರದ ರೋಟರಿ ರಕ್ತನಿಽ ಕೇಂದ್ರದಲ್ಲಿ ಮಂಗಳವಾರ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಿAದ ಅಖಂಡ ಭಾರತ ಸಂಕಲ್ಪ ದಿವಸ್ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ನಾನು ವರ್ಷಕ್ಕೆ ನಾಲ್ಕು ಬಾರಿ ರಕ್ತದಾನ ಮಾಡುತ್ತಿದ್ದೇನೆ. ಹೆಣ್ಣುಮಕ್ಕಳಲ್ಲಿ ರಕ್ತದಾನ ಕುರಿತು ಜಾಗೃತಿ ಮೂಡಿಸಲು ರಕ್ತನಿಽ ಕೇಂದ್ರ ಮತ್ತು ರೋಟರಿ ಸಂಸ್ಥೆ ಕಾಲೇಜುಗಳಲ್ಲಿ ರಕ್ತದಾನ ಜಾಗೃತಿ ಕೆಲಸವನ್ನು ಹಂತ ಹಂತವಾಗಿ ಮಾಡುತ್ತಿದೆ. ಇತರ ಶುಭ ಸಮಾರಂಭಗಳಲ್ಲಿ ರಕ್ತದಾನ ಮಾಡುವುದರಿಂದ ನೆನಪಿನಲ್ಲಿ ಉಳಿಯುವಂತೆ ಆಗುತ್ತದೆ ಎಂದರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಅಖಂಡ ಭಾರತ ಸಂಕಲ್ಪ ದಿವಸ್ ಅಂಗವಾಗಿ ರಕ್ತದಾನದಂತಹ ಶ್ರೇಷ್ಠ ಸಾಮಾಜಿಕ ಕೆಲಸ ಮಾಡುತ್ತಿರುವುದು ಅನುಕರಣೀಯ ಸಂಗತಿ. ಅಖಂಡ ಭಾರತ ಸಂಕಲ್ಪ ಕೇವಲ ಪರಿವಾರ ಕಾರ್ಯಕರ್ತರಿಗೆ ಸೀಮಿತವಾಗದೆ ಎಲ್ಲರೂ ಆಸಕ್ತಿವಹಿಸಬೇಕು ಎಂದು ತಿಳಿಸಿದರು.
ಆಂತರಿಕ ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಮಾತನಾಡಿದರು. ಬಜರಂಗದಳದ ತಾಲೂಕು ಸಂಚಾಲಕ ಸಂತೋಷ್ ಶಿವಾಜಿ, ಡಾ. ಎಚ್.ಎಂ.ಶಿವಕುಮಾರ್, ಪ್ರಜೀತ್, ರವೀಶ್‌ಕುಮಾರ್, ನವೀನ್ ಯಳವರಸಿ, ಶ್ವೇತಾ ಅನಿಲ್, ಕಿರಣ್ ಗೌಡ, ಮಂಜು ಗೌಡ, ಪುಷ್ಪಾ ಪೈ, ಅಮೃತಾ, ಉಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net