ಫೆ.16ರಂದು ಲೇಡಿಸ್ ಬಾರ್ ಸಿನಿಮಾ ಬಿಡುಗಡೆ

mysore
Published on

ಮೈಸೂರು: ಡಿ.ಎಂ.ಸಿ. ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಲೇಡಿಸ್ ಬಾರ್’ ಸಿನಿಮಾ ಫೆ.16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಹೆಣ್ಣು ಮಕ್ಕಳು ಕುಡಿತದ ಚಟಕ್ಕೆ ಬಲಿಯಾದರೆ ಸಮಾಜದಲ್ಲಿ ಯಾವೆಲ್ಲ ದುಷ್ಪರಿಣಾಮ ಉಂಟಾಗಬಹುದು ಎಂಬುದನ್ನು ಚಿತ್ರ ತಿಳಿಸಲಿದೆ. ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದ್ದು, ಮಂಡ್ಯ, ಮದ್ದೂರಿನಲ್ಲೂ ಕೆಲ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ.

ಮಹಿಳೆಯರೇ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ಕುಟುಂಬ ಸಮೇತ ವೀಕ್ಷಿಸುವ ಸಿನಿಮಾ ಇದಾಗಿದೆ ಎಂದು ಚಿತ್ರದ ನಿರ್ದೇಶಕ ಎಂ.ಎನ್.ಮುತ್ತು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರದ ನಿರ್ಮಾಪಕ ಟಿ.ಎಂ.ಸೋಮರಾಜ, ನಟಿಯರಾದ ಡಯಾನ, ಶೋಭಾರಾಣಿ, ಶಿವಾನಿಗೌಡ, ಪ್ರೇರಣಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net