ಮುಸುಕಿನ ಜೋಳಕ್ಕೆ ಲದ್ದಿ ಹುಳು ಬಾಧೆ

15 smg 4
ಮುಸುಕಿನ ಜೋಳದ ಹೊಲದಲ್ಲಿ ಹುಳು, ಕೀಟ ಬಾಧೆ ಪರಿಶೀಲಿಸುತ್ತಿರುವ ಅಧಿಕಾರಿಗಳು.
Published on

ಶಿವಮೊಗ್ಗ: ತಾಲೂಕಿನಲ್ಲಿ ಇದುವರೆಗೆ 11,060 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದೆ. ಮುಂಗಾರು ಹಂಗಾಮು ತಡವಾದ್ದರಿಂದ ಕುಂಸಿ, ಚೋರಡಿ, ಹುಣಸೋಡು, ಕುಂಚೇನಹಳ್ಳಿ, ಕಲ್ಲಾಪುರ ಮುಂತಾದ ಗ್ರಾಮಗಳಲ್ಲಿ ಕಾಂಡಕೊರಕ, ಎಲೆ ತಿನ್ನುವ ಹುಳುಗಳ ಹೊರತಾಗಿ ಲದ್ದಿ ಹುಳುವಿನ ಪ್ರಬೇಧವೂ ಪತ್ತೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಮೇಶ್ ತಿಳಿಸಿದ್ದಾರೆ. ಕೀಟವು ಸುಳಿಯಲ್ಲಿದ್ದುಕೊಂಡು ಎಲೆಗಳನ್ನು ತಿಂದು ಅಧಿಕ ಪ್ರಮಾಣದಲ್ಲಿ ಲದ್ದಿಯನ್ನು ಸುಳಿಗಳಲ್ಲಿ ಹಾಕುತ್ತದೆ. ಇದರಿಂದ ಇಳುವರಿ ಕುಂಠಿತವಾಗುತ್ತದೆ. ಇದರ ಹತೋಟಿಗೆ 15ರಿಂದ 20 ದಿನದ ಬೆಳೆಯಲ್ಲಿ ಪ್ರಾರಂಭ ಹಂತದಲ್ಲಿ ಬೇವಿನ ಎಣ್ಣೆ 2 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಕೀಟದ ಸಂಪೂರ್ಣ ನಿರ್ವಹಣೆ ಕ್ರಮದ ಬಗ್ಗೆ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net