

ಮುಂಡಗೋಡ: ಸ್ವಾಯತ್ತ ಲಡಾಕ್ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಕೌನ್ಸಿಲರ್ ತಾಶಿ ಗ್ಯಾಲಸನ್ ತಾಲೂಕಿನ ಟಿಬೆಟಿಯನ್ ಕ್ಯಾಂಪ್ಗೆ ಶುಕ್ರವಾರ ಭೇಟಿ ನೀಡಿದರು.
ಕ್ಯಾಂಪ್ ನಂ.2ರ ಡ್ರೆಪುಂಗ್ ಗೋಮಾಂಗ್ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿರುವ ಅವರು, ಟಿಬೇಟಿಯನ್ ಕ್ಯಾಂಪ್ನ ವಿವಿಧ ಬೌದ್ಧ ಮಂದಿರಗಳು, ಸೈನಿಕ ಕಲ್ಯಾಣ ಕೇಂದ್ರ, ಕಮ್ಯುನಿಟಿ ಹಾಲ್ಗೆ ಭೇಟಿ ನೀಡಲಿದ್ದಾರೆ.
ಟಿಬೇಟಿಯನ್ ಕ್ಯಾಂಪ್ನ ಮುಖಂಡರು ಹಾಗೂ ಹಿರಿಯ ಸನ್ಯಾಸಿಗಳೊಂದಿಗೆ ಮಾತುಕತೆ ನಡೆಸಿ, ಟಿಬೇಟಿಯನ್ ಕ್ಯಾಂಪ್ನ ಅಭಿವೃದ್ಧಿಗೆ ಪೂರಕ ಅಂಶಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಿದ್ದಾರೆ ಎಂದು ಟಿಬೇಟಿಯನ್ ಮೂಲಗಳಿಂದ ತಿಳಿದುಬಂದಿದೆ. ಡಿ.28ರಂದು ಕ್ಯಾಂಪ್ನಿಂದ ಲಡಾಕ್ಗೆ ಪ್ರಯಾಣಿಸಲಿದ್ದಾರೆ.