ಇಡಿ ದಾಳಿ ರಾಜಕೀಯ ಪ್ರೇರಿತ,  ಸಚಿವ ಲಾಡ್ ಹೇಳಿಕೆ

IMG-20250613-WA0020.jpg
Published on

ಹುಬ್ಬಳ್ಳಿ: ಬಳ್ಳಾರಿ ಕಾಂಗ್ರೆಸ್ ನಾಯಕರ ಮನೆ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತವೇ ಆಗಿದೆ ಎಂಬುದು ಇದುವರೆಗಿನ ದಾಳಿಗಳನ್ನು ಪರಿಶೀಲಿಸಿದರೆ ಗೊತ್ತಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಕುಂದಗೋಳದಲ್ಲಿ ಶುಕ್ರವಾರ ಮಳೆ ಹಾನಿ ಪ್ರದೇಶ ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ 11 ವರ್ಷದಲ್ಲಿ ದೇಶದ ಹಲವೆಡೆ 4500 ಇಡಿ ದಾಳಿಯಾಗಿವೆ. ಈ ದಾಳಿಗಳ ಯಶಸ್ಸಿನ ದರ ಶೇ. 1ರಷ್ಟು ಕೂಡ ಇಲ್ಲ. ಉಳಿದಂತೆ ಶೇ. 90ರಷ್ಟು ದಾಳಿಗಳು ದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿಯೇತರ ರಾಜ್ಯಗಳಲ್ಲಿಯೇ ಆಗಿವೆ. ಇಡಿ ದಾಳಿಗಳ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ. ಯಾವುದೇ ರಾಜಕೀಯ ಪಕ್ಷ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ನವರು ಚುನಾವಣೆಗೆ ಹಣ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಬಿಜೆಪಿವರ ಎಲೆಕ್ಶನ್ ಬಾಂಡ್ ಕಥೆ ಎಲ್ಲಿಗೆ ಬಂದಿದೆ? ಗೋಮಾಂಸ ರಫ್ತು ಮಾಡುವ ಕಂಪನಿಗಳಿಂದ ಬಿಜೆಪಿ ನಿಧಿ ಸಂಗ್ರಹಿಸಿದೆಯಲ್ಲ, ಇದರ ಬಗ್ಗೆ ಚರ್ಚೆಯಾಗಬೇಕು. ಪಿಎಂ ಕೇರ್ ಫಂಡ್ ಹೆಸರಲ್ಲಿ ಹಣ ಸಂಗ್ರಹಿಸಲಾಗಿದೆ. ಇದರ ಬಗ್ಗೆ ಬಿಜೆಪಿಗರನ್ನು ಕೇಳಬೇಕಾಗಿದೆ ಎಂದು ಸಚಿವರು ಪ್ರಶ್ನೆಗಳ ಸುರಿಮಳೆ ಗರೆದರು.

ಹೊಸ ವಿಮಾನ: ಅಹಮದಾಬಾದ ವಿಮಾನ ದುರಂತ ಆಗಬಾರದಾಗಿತ್ತು. ಹೊಸ ವಿಮಾನವೇ ಅವಘಡಕ್ಕೆ ಸಿಲುಕಿರುವುದು ದುರದೃಷ್ಟಕರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಸಚಿವ ಲಾಡ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net