ಸಚಿವ ಜೋಶಿಗೆ ಲಾಡ್ ತಿರುಗೇಟು

web (1)
Published on

ದಾರವಾಡ: ಕೇಂದ್ರದಿ೦ದ ರಾಜ್ಯಕ್ಕೆ ಬಿಡುಗಡೆಯಾಗುವ ಅನುದಾನದ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದರು. ಇತ್ತೀಚೆಗೆ ನಡೆದ ಜಿ- 20 ಸಮಾವೇಶಕ್ಕೆ 4,200 ಕೋಟಿ ರೂ. ಖರ್ಚಾಗಿದೆ. ಅದೇ ಸಮಾವೇಶಗಳು ಫ್ರಾನ್ಸ್ ನಲ್ಲಿ 700 ಕೋಟಿ ರೂ., ಇಂಡೋನೇಷ್ಯಾದಲ್ಲಿ 170 ಕೋಟಿ ರೂ. ವೆಚ್ಚದಲ್ಲಿ ನಡೆದಿವೆ. ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಖರ್ಚಾಗಿರುವುದು ಬಿಜೆಪಿ ದುಡ್ಡಲ್ಲ. ಸಾರ್ವಜನಿಕರ ತೆರಿಗೆಯ ಹಣ. ಈ ಬಗ್ಗೆ ಸಚಿವ ಜೋಶಿಯವರು ಮಾತನಾಡುವುದಿಲ್ಲ ಎಂದರು.
ಸಚಿವ ಜೋಶಿಯವರು ಗಣೇಶೋತ್ಸವ ಆಚರಣೆ ವಿಚಾರವಾಗಿ ಮಾತನಾಡುತ್ತಾರೆ. ಅವರು ಕೇವಲ ಗಣೇಶ, ರಾಮ, ಹಬ್ಬ, ದೀಪಾವಳಿ, ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಮಣಿಪುರ, ಚೈನಾ ವಿಚಾರಗಳ ಬಗ್ಗೆ ಮಾತನಾಡಲಿ. ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಉದ್ದಿಮೆದಾರರ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಅವರ `ಪಬ್ಲಿಸಿಟಿ ಪಿಕ್ಚರ್' ಎಷ್ಟು ಓಡುತ್ತದೋ ಕಾದುನೋಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net