

ಧಾರವಾಡ: ಜಗದೀಶ ಶೆಟ್ಟರ್ ಅವರು ಮರಳಿ ಬಿಜೆಪಿ ಸೇರ್ಪಡೆಯಾಗಿರುವುದು ವೈಯಕ್ತಿಕವಾಗಿ ನನಗೆ ಬಹಳ ಖುಷಿಯÁಗಿದೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಕಾಂಗ್ರೆಸ್‌ಗೆ ಏಕೆ ಬಂದರು, ಏಕೆ ಬಿಜೆಪಿಗೆ ಮತ್ತೆ ಹೋದರು ಎಂಬುದನ್ನು ಅವರನ್ನೇ ಕೇಳಬೇಕು. ಬಿಜೆಪಿ ಬಿಟ್ಟು ಬರುವಾಗ ಬೇರೆ ಹೇಳಿದ್ದರು, ಈಗ ಮರಳಿ ಹೋಗುವಾಗ ಬೇರೆನೇ ಹೇಳುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಗೌರವ ಕೊಟ್ಟಿದೆ. ಈ ಬಗ್ಗೆ ಮೊದಲೇ ಹೊಗೆ ಇತ್ತು. ಮರಳಿ ಹೋಗುವುದಕ್ಕೆ ಅವರ ಪರ್ಸನಲ್ ಸಮಸ್ಯೆ ಕಾರಣವಾಗಿರಬಹುದು. ಕಾಂಗ್ರೆಸ್ ಪಕ್ಷ ಬಾಗಿಲು ಇಲ್ಲದ ಪಕ್ಷ. ಯÁರು ಬೇಕಾದರೂ ಬರಬಹದು, ಇಳಿಯಬಹುದು. ಹೀಗಾಗಿ ನಮಗೆ ಏನೂ ವ್ಯತ್ಯಾಸ ಆಗುವುದಿಲ್ಲ ಎಂದರು.