ಪಾರ್ಥೇನಿಯಂ ಮನುಷ್ಯನಿಗೆ ಅಪಾಯಕಾರಿ

dj hyr kvk
Published on

ಹಿರಿಯೂರು: ಪಾರ್ಥೇನಿಯಂ ಸಸ್ಯ ವಿನಾಶಕಾರಿ ಕಳೆಯಾಗಿದ್ದು, ಇದರಲ್ಲಿನ ಪಾರ್ಥಿನ್ ಎಂಬ ಲ್ಯಾಕ್ಟೋನ್ ಅಂಶ ಮನುಷ್ಯರು, ಪ್ರಾಣಿಗಳಿಗೆ ಅಪಾಯಕಾರಿಯಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಕುಮಾರ್ ಹೇಳಿದರು.

ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಪಾರ್ಥೆನಿಯಂ ಜಾಗೃತಿ ಸಪ್ತಾಹದಲ್ಲಿ ಮಾತನಾಡಿ, ಕೃಷಿಯಲ್ಲಿ ಕಡಿಮೆ ಬೆಲೆ ಉತ್ಪಾದನೆ, ಬೆಳೆಯ ಇಳುವರಿ ಮಣ್ಣಿನ ಗುಣಮಟ್ಟಕ್ಕೆ ಹಾನಿ ಮಾಡುವುದರಿಂದ ಕಳೆಯ ಸಮಗ್ರ ನಿರ್ವಹಣೆ ಅಗತ್ಯವಾಗಿದೆ ಎಂದರು.

ಡಾ.ರವಿಕುಮಾರ ಮಾತನಾಡಿ, ಕಸದಿಂದ ರಸವನ್ನು ಹೇಗೆ ಮಾಡಬೇಕು ಮತ್ತು ಕಸದ ಕೊಳಯುವಿಕೆ ಹಾಗೂ ವಿಘಟನೆ ಪ್ರಕ್ರಿಯೆ ಬಗ್ಗೆ ತಿಳಿಸಿದರು.

ಪಾರ್ಥೇನಿಯಂ ಕಳೆಯನ್ನು ಹೂವು ಬಿಡುವ ಮುಂಚಿತವಾಗಿ ನಿರ್ಮೂಲನೆ ಮಾಡಬೇಕೆಂದು ಮಾಹಿತಿ ನೀಡಿದರು.

ಡಾ.ಸರಸ್ವತಿ ಮಾತನಾಡಿ, ಪಾರ್ಥೇನಿಯಂ ಕಳೆಯನ್ನು ಕಡಿಮೆ ಮಾಡುವುದರಿಂದ ಹೆಚ್ಚಿನ ಆಹಾರೋತ್ಪಾದನೆ ಮಾಡಿ ಒಳ್ಳೆಯ ಪೋಷಕಾಂಶಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಕಾರ್ಯಕ್ರದಲ್ಲಿ ತಾಲೂಕಿನ ವಿವಿಧ ಶಾಲೆಯ 70 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಡಾ.ಪ್ರೀತಿ, ಡಾ.ಓಂಕಾರಪ್ಪ, ಕೆ.ವಿ.ಅಮರೇಶ್, ಹರ್ಷ, ಡಾ.ಪ್ರಕಾಶ್, ಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net