ಗ್ರಾಮಾಂತರ ಶಾಲೆಗಳ ಶಿಕ್ಷಕರ ಕೊರತೆ ನೀಗಿಸಬೇಕು: ಡಾ.ಜಪಾನಂದ ಜೀ

PVG_Japanandji
Published on

ಪಾವಗಡ: ಭವಿಷ್ಯ ಭಾರತದ ನಿರ್ಮಾಣ ಇಂತಹ ಕುಗ್ರಾಮಗಳ ಶೈಕ್ಷಣಿಕ ಸೇವೆಗಳೇ ಅತ್ಯಂತ ಮಹತ್ವವಾದ ಪಾತ್ರ ವಹಿಸುತ್ತದೆ ಎಂದು ಶ್ರೀ ರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದ ಜೀ ಹೇಳಿದರು.

ತಾಲೂಕಿನ ಕುಗ್ರಾಮವಾದ ಕೆ ರಾಂಪುರ ಶಾಲೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಸ್ವಾಮೀಜಿ, ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ಶಿಕ್ಷಕರ ಕೊರತೆಯನ್ನು ನೀಗಿಸುವುದು ಬಹುಮುಖ್ಯವಾಗಿದೆ. ಗ್ರಾಮಾಂತರ ಭಾಗದಲ್ಲಿ ಸೇವೆ ಸಲ್ಲಿಸುವ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಸರಿಯಾದ ಸವಲತ್ತುಗಳನ್ನು ನೀಡಿ ಉತ್ತೇಜನ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಗಡಿನಾಡ ಪ್ರಾಂತ್ಯದಲ್ಲಿ ಜಪಾನಂದ ಸ್ವಾಮೀಜಿ ಇರುವುದೇ ನಮ್ಮ ಸೌಭಾಗ್ಯ. ಸ್ವಾಮೀಜಿಯವರ ಸೇವಾ ಕಾರ್ಯದ ವೈಖರಿ ಪ್ರಶಂಶನಾರ್ಹ. ಆರೋಗ್ಯ, ಅಕ್ಷರ, ಅಭಿವೃದ್ಧಿ ಹಾಗೂ ಆಧ್ಯಾತ್ಮದ ಮಾರ್ಗಗಳನ್ನು ಅತ್ಯಂತ ಯಶಸ್ವಿಯಾಗಿ ದಕ್ಷತೆಯಿಂದ ಮೂರು ದಶಕಗಳು ಮಿಗಿಲಾಗಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಎಚ್.ವಿ.ವೆಂಕಟೇಶ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net