

ಆನೇಕಲ್: ಕರೊನಾ ಮಹಾಮಾರಿ ಹೆಚ್ಚಾಗುತ್ತಿದ್ದರೂ ಪುರಸಭೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯಿಂದ ತಾಲೂಕಿನಾದ್ಯಂತ ಕಂಟೇನ್ಮೆಂಟ್ ಜೋನ್ ನಿರ್ಮಾಣ ಹಾಗೂ ಸೋಂಕು ನಿವಾರಕ ಸಿಂಪಡಿಸಲು ಸಿಬ್ಬಂದಿ ಕೊರತೆ ಎದುರಾಗಿದೆ.
ಪಟ್ಟಣದಲ್ಲಿ ದಿನಕಳೆದಂತೆ ಸೋಂಕು ಹೆಚ್ಚಾಗುತ್ತಿದ್ದರೂ ಪ್ರದೇಶ ಸೀಲ್ಡೌನ್ ಮಾಡಲು, ಸ್ಯಾನಿಟೈಸೇಷನ್ ಮಾಡಲು ಸಿಬ್ಬಂದಿ ಕೊರತೆಯಿಂದ ಪಾಸಿಟಿವ್ ಬಂದು ಮೂರ್ನಾಲ್ಕು ದಿನ ಕಳೆದರೂ ಮುನ್ನೆಚ್ಚರಿಕೆ ಕ್ರಮ ತೆಗದುಕೊಳ್ಳುವಲ್ಲಿ ಪುರಸಭೆ ವಿಫಲವಾಗುತ್ತಿದೆ.
ಕರೊನಾ ಹರಡುವಿಕೆ ತಡೆಗಟ್ಟಬೇಕಾದ ಪುರಸಭೆಗೆ ಸಿಬ್ಬಂದಿ ಇಲ್ಲದ ಪರಿಣಾಮ ಇರುವ ಸಿಬ್ಬಂದಿಯೇ ಹಗಲು ರಾತ್ರಿ ಎನ್ನದೆ ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.
ಆನೇಕಲ್ ಪುರಸಭೆ 27 ವಾರ್ಡ್ ಒಳಗೊಂಡಿದ್ದು, ಒಂದೆರಡು ವಾರ್ಡ್ ಹೊರತುಪಡಿಸಿದರೆ ಉಳಿದ ವಾರ್ಡ್‌ಗಳಲ್ಲೂ ಕರೊನಾ ಸೋಂಕಿತರಿದ್ದಾರೆ. ಮುಂಜಾಗ್ರತೆ ವಹಿಸಬೇಕಾದ ಪುರಸಭೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇದೆ. ಇರುವ 104 ನೌಕರರಲ್ಲಿ ಅರ್ಧದಷ್ಟು ಸಿಬ್ಬಂದಿ ಮಾತ್ರ ಇರುವುದರಿಂದ ಕೆಲಸಕ್ಕೆ ಸಮಸ್ಯೆಯಾಗಿದೆ. ರಾಜೇಶ್, ಪುರಸಭೆ, ಆನೇಕಲ್ ಪುರಸಭೆ ಮುಖ್ಯಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ಈ ಬಗ್ಗೆ ಗಮನಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದು, ಪಟ್ಟಣದಲ್ಲಿ ಕರೊನಾ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಸುರೇಶ್, ಪುರಸಭಾ ಸದಸ್ಯ, ಆನೇಕಲ್ ಪುರಸಭೆಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆ ಇದ್ದು, ಈಗ ಕರೊನಾ ಸಮಯದಲ್ಲಿ ಭಾರಿ ಹೊಡೆತ ಬಿದ್ದಿದೆ. ಚಂದಾಪುರ ಪುರಸಭೆ ಮುಖ್ಯಾಧಿಕಾರಿಗಳನ್ನೇ ಪ್ರಭಾರಯಾಗಿ ನೇಮಕ ಮಾಡಲಾಗಿದೆ. ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಮಹದೇವಯ್ಯ, ತಹಸೀಲ್ದಾರ್