

ಉಳ್ಳಾಲ: ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಪ್ರವಾಸೋದ್ಯಮ, ಗೋಶಾಲೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಸಮೀಪದಲ್ಲಿರುವ ಜಾಗವನ್ನು ಕ್ಷೇತ್ರಕ್ಕೆ ಒದಗಿಸುವಂತೆ ಕೋಟೆಕಾರು ಸನಾತನ ಧರ್ಮ ಜಾಗೃತಿ ಸಮಿತಿಯಿಂದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುವಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸೋಮನಾಥ ಕ್ಷೇತ್ರದ ಹೆಸರಲ್ಲಿ ಮುಂದಕ್ಕೆ ಪ್ರಸಾದ್ ಯೋಜನೆಯಡಿಯಲ್ಲಿ ಪ್ರವಾಸೋದ್ಯಮ, ಗೋಶಾಲೆ ನಿರ್ವಾಣ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕೆಂಬ ಉದ್ದೇಶವಿದ್ದರೂ ಸ್ಥಳಾವಕಾಶದ ಕೊರತೆ ಇದೆ. ಕ್ಷೇತ್ರದ ಎದುರು ಸೋಮೇಶ್ವರ ಗ್ರಾಮಕ್ಕೊಳಪಟ್ಟ ಸರ್ವೇ ನಂಬರ್ 74/12ಎ ಯಲ್ಲಿ 1.35 ಎಕರೆ ಹಾಗೂ ಸರ್ವೇ ನಂಬರ್ 206/5ಸಿ ಯಲ್ಲಿ 2.31 ಎಕರೆ ಸಹಿತ ಒಟ್ಟು 3.66 ಎಕರೆ ಸರ್ಕಾರಿ ಜಾಗ ರೈಲ್ವೆ ಇಲಾಖೆ ಅಧೀನದಲ್ಲಿದೆ. ಈ ಎರಡು ಸರ್ಕಾರಿ ಜಾಗದಲ್ಲಿ 75 ವಷರ್ಗಳ ಹಿಂದೆ ರೈಲ್ವೆ ಇಲಾಖೆಗೆ ಜಲ್ಲಿ ಕಲ್ಲು ತೆಗೆಯಲಿಕ್ಕಾಗಿ ಭೂವಾಪನ ಇಲಾಖೆಯಿಂದ ಪರವಾನಗಿ ನೀಡಲಾಗಿತ್ತು. ಪ್ರಸ್ತುತ ಆ ಪರವಾನಗಿಯು ರದ್ದಾಗಿ ಸುಮಾರು 35 ವಷರ್ಗಳೇ ಕಳೆದಿವೆ. ಕ್ಷೇತ್ರದ ಅಭಿವೃದ್ಧಿಗೆ ಸ್ಥಳದ ಕೊರತೆಯಿರುವ ಕಾರಣ ರೈಲ್ವೆ ಇಲಾಖೆ ಹೆಸರಿನಲ್ಲಿರುವ ಸರ್ಕಾರಿ ಜಾಗದ ಪಹಣಿ ಪತ್ರ ರದ್ದುಪಡಿಸಿ ದೇವಸ್ಥಾನದ ಹೆಸರಿಗೆ ವಾಡಿಸುವಂತೆ ಕೋರಿದರು.
ಸಮಿತಿ ಅಧ್ಯಕ್ಷ ರಮೇಶ್ ಕೊಲ್ಯ, ಉಪಾಧ್ಯಕ್ಷ ಸುರೇಂದ್ರನ್ ಪಿ.ಬೀರಿ, ಕೋಶಾಧಿಕಾರಿ ಗಣೇಶ್ ಕೊಲ್ಯ, ಪ್ರಧಾನ ಕಾರ್ಯದರ್ಶಿ ಕಷ್ಣರಾಜ್ ಕೆ.ಆರ್., ಜತೆ ಕಾರ್ಯದರ್ಶಿ ಜಯಂತ್ ಸಂಕೋಳಿಗೆ, ಸದಸ್ಯರಾದ ಕಷ್ಣ ಶೆಟ್ಟಿ ತಾವಾರ್, ರಾವೇಂದ್ರ ವಾಸ್ಟರ್, ಪವಿತ್ರಾ ಗಟ್ಟಿ, ರಾವನ್ ಬೀರಿ, ಪದ್ಮನಾಭ ಗಟ್ಟಿ, ಕಷ್ಣ ಬಿ.ಎಂ., ರೇವತಿ ಟೀಚರ್, ಪ್ರದೀಪ್ಚಂದ್ರ ಶೆಟ್ಟಿ, ವಸಂತ ಉಪಸ್ಥಿತರಿದ್ದರು.
ಪ್ರಸಾದ್, ಸ್ವದೇಶ್ ದರ್ಶನ್ ಯೋಜನೆಗೆ ಸೇರಿಸಿ
ಸೋಮೇಶ್ವರ ಕ್ಷೇತ್ರದಲ್ಲಿ ಪ್ರಕೃತಿ ರಮಣೀಯವಾದ ಬೀಚ್, ರುದ್ರಪಾದೆ, ಪಾದೆಕಲ್ಲಿನ ಮೇಲೆ ಕಾರಣಿಕ ಸೋಮನಾಥ ದೇವಸ್ಥಾನವಿದ್ದು, ಪವಿತ್ರವಾದ ‘ಗಧಾ ತೀರ್ಥ’ ಕೆರೆಯೂ ಇದೆ. ಈ ಕ್ಷೇತ್ರವನ್ನು ಕೇಂದ್ರ ಸರ್ಕಾರದ ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಯ ಪಟ್ಟಿಗೆ ಸೇರಿಸುವಂತೆ ಸನಾತನ ಧರ್ಮ ಜಾಗೃತಿ ಸಮಿತಿಯು ಸಂಸದರಲ್ಲಿ ಮನವಿ ಮಾಡಿದೆ.