ಬಜೆಟ್ ಮೇಲಿನ ಚರ್ಚೆ ಭಾಷಣ ಆರಂಭಿಸಲು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಹಿಂದೇಟು ಹಾಕಿದ್ದೇಕೆ?

siddaramaiah
Published on

ಬೆಂಗಳೂರು: ಬಜೆಟ್ ಮಂಡನೆಯ ಮರುದಿನವೇ ವಿಧಾನಸಭೆಯಲ್ಲಿ ಶಾಸಕರು ಹಾಗೂ ಸಚಿವರ ಕೊರತೆ ಎದ್ದು ಕಾಣಿಸಿತು.

ದಿನದ ಕಲಾಪ ಆರಂಭದ ವೇಳೆ ಪ್ರಶ್ನೋತ್ತರ ವೇಳೆ ಉತ್ತರಿಸಲು ಸಂಬಂಧಪಟ್ಟ ಸಚಿವರು ಹಾಜರಿರಲಿಲ್ಲ. ಇದರಿಂದ ಪ್ರತಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ಕಾರಣಕ್ಕೆ ಬಜೆಟ್ ಮೇಲಿನ ಚರ್ಚೆ ಭಾಷಣ ಆರಂಭಿಸಲು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಕೂಡ ಹಿಂದೇಟು ಹೊಡೆದರು.

ನಾನು ಯಾರಿಗೆ ಮಾತನಾಡಲಿ. ಸಚಿವರು ಇಲ್ಲ, ಅಧಿಕಾರಿಗಳು ಇಲ್ಲ, ಮುಖ್ಯಮಂತ್ರಿಗಳು ಸಹ ಇಲ್ಲ. ಯಾಕಾಗಿ ಅಧಿವೇಶನ ಕರೆದಿದ್ದೀರ ಎಂದು ಇದೇ ವೇಳೆ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವೇಳಾಪಟ್ಟಿ ಪ್ರಕಾರ ಬುಧವಾರ ಬಜೆಟ್ ಮೇಲಿನ ಚರ್ಚೆ ಆರಂಭವಾಗಬೇಕಿತ್ತು, ಆದರೆ ಶಾಸಕರು ಹಾಗೂ ಸಚಿವರ ಕೊರತೆಯ ಕಾರಣದಿಂದ ಸ್ಪೀಕರ್ ಕಲಾಪವನ್ನು ಮಧ್ಯಾಹ್ನವೇ ಮೊಟಕುಗೊಳಿಸಿ ಸೋಮವಾರಕ್ಕೆ ಮುಂದೂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net