

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾವು ನಿಮಗಾಗಿ ನೀವು ನಮಗಾಗಿ ಎಂಬುದು ಸಹಕಾರಿ ಸಂದ ಮುಖ್ಯತತ್ವ. ಇದು ಆದರ್ಶ ಸಮಾಜದ ಬುನಾದಿ. ಸಾರ್ವತ್ರಿಕ ಸೇವೆ ಹಾಗೂ ಸಮ ಸಮಾಜ ನಿಮಿರ್ಸುವಲ್ಲಿ ಅದರ ಪಾತ್ರ ಹಿರಿದಾಗಿದೆ ಎಂದು ಕೃಷಿ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಡಾ. ರಾಜೇಂದ್ರ ಪೋದ್ದಾರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಸೋಮವಾರ ಆಯೋಜಿಸಿದ್ದ ಪ್ರೊ. ಎಸ್.ಎಸ್. ದೇಸಾಯಿ ದತ್ತಿ ಉದ್ಘಾಟನೆ, ಅನುಪಮ ಸಹಕಾರಿ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ಸಹಕಾರ ೇತ್ರದ ಮುಂದಿರುವ ಸವಾಲುಗಳು ಮತ್ತು ಪರಿಹಾರ ಕುರಿತು ಉಪನ್ಯಾಸ ನೀಡಿದರು.
ಭಾರತದಲ್ಲೇ ಮೊಟ್ಟ ಮೊದಲ ಸಹಕಾರಿ ಸಂವು 1950ರಲ್ಲಿ ಅವಿಭಜಿತ ಧಾರವಾಡ ಜಿಲ್ಲೆ ಕಣಗಿನಹಾಳದಲ್ಲಿ ಸ್ಥಾಪನೆಯಾಗಿದ್ದು ನಮ್ಮ ಹೆಮ್ಮೆ. ಇದು ವ್ಯಕ್ತಿಗಾಗಿ ಸಮಾಜ, ಸಮಾಜಕ್ಕಾಗಿ ವ್ಯಕ್ತಿ ಎಂಬ ತತ್ವದಡಿ ಉಳಿತಾಯ ಹಾಗೂ ಸ್ವ ಸಹಾಯ ಎಂಬ ನೈತಿಕತೆ ಹಾಗೂ ಜೀವನ ವಿಧಾನದ ಗುರಿ ಹೊಂದಿದೆ. ಪ್ರಸ್ತುತ ಸಂದರ್ಭದಲ್ಲಿ ಸಹಕಾರಿ ಸಾಧನೆಗೆ ಬಗ್ಗೆ ಚಿಂತನ&ಮಂಥನ ಅಗತ್ಯ. ಜಾಗತೀಕರಣದ ನೆಪದಲ್ಲಿ ಸಹಕಾರಿ ೇತ್ರ ನಿರ್ಲಸಿದರೆ ರ್ದುಭಿೆ ತಪ್ಪಿದ್ದಲ್ಲ ಎಂದರು.
ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ಅಧ್ಯ ಜಿ.ಪಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಸಹಕಾರ ೇತ್ರದಲ್ಲಿ ಪ್ರಾಮಾಣಿಕತೆ, ವಿಶ್ವಾಸದ ಕೊರತೆ ಇರುವುದ ವಿಷಾದನೀಯ ಎಂದರು.
ಧಾರವಾಡ ಕೆಸಿಸಿ ಬ್ಯಾಂಕ್ ವಿಶ್ರಾಂತ ಪ್ರಧಾನ ವ್ಯವಸ್ಥಾಪಕ ಎಸ್.ಜಿ. ಪಾಟೀಲ ಅವರಿಗೆ ಅನುಪಮ ಸಹಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಸಿ.ಆರ್. ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಎಸ್.ಎಸ್. ದೇಸಾಯಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಗುರು ಹಿರೇಮಠ, ಶೋಭಾ ದೇಸಾಯಿ, ಸುನೀಲ ಪಾಟೀಲ, ಲಿಂಗರಾಜ ಪಾಟೀಲ, ಚೇತನ ತಾಯಣ್ಣವರ, ಮಲ್ಲಿಕಾರ್ಜುನ ಪಾಟೀಲ, ಶರಣಪ್ಪ ಮೆಣಸಿನಕಾಯಿ, ಸಂಗಮೇಶ ಮೆಣಸಿನಕಾಯಿ, ಅನಸೂಯಾ ಮೆಣಸಿನಕಾಯಿ, ಪಾರ್ವತಿ ಮೆಣಸಿನಕಾಯಿ, ವೀರಭದ್ರಪ್ಪ ಕುಂಬಾರ, ಬಿ.ಡಿ. ಪಾಟೀಲ, ಸಿ.ಎಸ್. ಪಾಟೀಲ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.