

ಧಾರವಾಡ: ಗೃಹಲಕ್ಷ್ಮೀ ಯೋಜನೆಯ ಚಾಲನೆ ಕಾರ್ಯಕ್ರಮದಲ್ಲಿ ಅಭಿಪ್ರಾಯ ಹೇಳುವ ಫಲಾನುಭವಿಗಳ ಕೊರತೆ ಕಂಡುಬಂತು. ಅಧಿಕಾರಿಗಳು ಮುಂಚಿತವಾಗಿಯೇ ಓರ್ವ ಫಲಾನುಭವಿಯನ್ನು ಮಾತನಾಡಲು ಸಿದ್ಧಗೊಳಿಸಿದ್ದರು. ಆದರೆ ಸುಜಾತಾ ಬೆಟಗೇರಿ ಎಂಬ ಲಾನುಭವಿ ನಿರೀಕ್ಷಿತ ಮಟ್ಟದಲ್ಲಿ ಮಾತನಾಡಲಿಲ್ಲ. ಅವರು ಚುಟುಕಾಗಿ ಅಭಿಪ್ರಾಯ ಮುಗಿಸಿದ್ದರಿಂದ ಅಧಿಕಾರಿಗಳು, ಅತಿಥಿಗಳಿಗೆ ನಿರಾಸೆಯಾಯಿತು. ನಿರೂಪಕರು ಯಾರಾದರೂ ಬನ್ನಿ ಎಂದು ಕರೆದರೂ ಲಾನುಭವಿಗಳು ಮುಂದೆ ಬರಲಿಲ್ಲ. ಸಂಘಟಕರು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯನ್ನು ಕರೆದರೂ ಅವರಿಂದಲೂ ಕಾರ್ಯಕ್ರಮದ ಬಗ್ಗೆ ಸಮರ್ಪಕವಾಗಿ ಮಾತನಾಡಲಿಲ್ಲ. ಕೊನೆಗೆ ಅನಿವಾರ್ಯವಾಗಿ ಗ್ರಾ.ಪಂ. ಸದಸ್ಯೆ ರೇಖಾ ನಾಯ್ಕರ್ ಅಭಿಪ್ರಾಯ ಹಂಚಿಕೊಂಡರು. ಕೊನೆಗೆ ಸಲೀಂ ಅಹ್ಮದ್ ಭಾಷಣ ಆರಂಭಿಸಿದರು