ಮೂಲಸೌಕರ್ಯ ಒದಗಿಸಲು ಆಗ್ರಹ

jai bheem
Published on

ಹುಬ್ಬಳ್ಳಿ: ನವನಗರದಲ್ಲಿ ಕಾಯಂ ಪೌರ ಕಾರ್ವಿುಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಅಲ್ಲಿ ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಜೈ ಭೀಮ ಯುವ ಶಕ್ತಿ ಸೇನಾ ಆಗ್ರಹಿಸಿದೆ.

ಈ ಕುರಿತು ಸೇನಾ ಪದಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ಒಟ್ಟು 122 ಕಾಯಂ ಪೌರ ಕಾರ್ವಿುಕರಿಗೆ ನಿವೇಶನಗಳು ಮಂಜೂರಾಗಿದ್ದು, ಸುಮಾರು 12 ಪೌರ ಕಾರ್ವಿುಕರು ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಮೂಲಸೌಕರ್ಯಗಳಿಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಸುತ್ತಲೂ ಗಿಡ ಗಂಟಿಗಳು ಬೆಳೆದಿದ್ದು, ಜನರು ಕಸವನ್ನು ತಂದು ಎಸೆಯುತ್ತಿದ್ದಾರೆ. ಗಿಡ ಗಂಟಿಗಳನ್ನು ಜೆಸಿಬಿ ಬಳಸಿ ಸ್ವಚ್ಛಗೊಳಿಸಿ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಸೇನಾ ಜಿಲ್ಲಾಧ್ಯಕ್ಷ ಹರೀಶ ಗುಂಟ್ರಾಳ, ಉಪಾಧ್ಯಕ್ಷ ಸುನಿಲ ಕುರ್ಡೆಕರ್, ಗುರುನಾಥ ಮೊರಬದ, ಈಶ್ವರ ಹಿರೇಮನಿ, ಡಿಎಸ್​ಎಸ್ ಸಂಚಾಲಕ ಅಶೋಕ ನವಲಗುಂದ, ರಮೇಶ ಹಿರೇಮನಿ, ಪರಶುರಾಮ ಛಲವಾದಿ, ಬಸವರಾಜ ನವಲಗುಂದ, ಸತೀಶ ಮಿಶ್ರೀಕೋಟಿ, ಚನ್ನಪ್ಪ ಕಾಳೆಯವರ, ವಿನಾಯಕ ಪೂಜಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net