

ಹುಕ್ಕೇರಿ: ಮೊಬೈಲ್ ಬಂದು ನಿಜವಾದ ಛಾಯಾಗ್ರಾಹಕರ ಸಂಖ್ಯೆ ಕಡಿಮೆ ಮಾಡುತ್ತಿದೆ. ಕ್ರಿಯಾಶೀಲತೆ ಕಡಿಮೆಯಾಗಿ ರೆಡಿಮೇಡ್ ಆಹಾರದಂತೆ ಪೋಟೋಗ್ರಫಿ ಆಗಿದೆ ಎಂದು ಕರ್ನಾಟಕ ಪೋಟೋಗ್ರಾರ್ ಅಸೋಸಿಯೇಷನ್ ರಾಜ್ಯ ನಿರ್ದೇಶಕ ಕೆ.ಆರ್.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದಲ್ಲಿ ತಾಲೂಕಿನ ವತ್ತಿ ನಿರತ ಛಾಯಾಗ್ರಹಕರ ಸಂದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಕ ದಿನಾಚರಣೆ ಮತ್ತು ಲೇಬರ್ ಕಾರ್ಡ್ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಹಿಂದಿನ ಹಿರಿಯರು ತೆಗೆದ ಪೋಟೋ ಗುಣಮಟ್ಟ ಮತ್ತು ಸ್ಪಷ್ಟತೆ ಇಂದಿಗೂ ಆಶ್ಚರ್ಯ ಮೂಡಿಸುತ್ತವೆ ಎಂದರು.
ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಜೋಗುರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಒಂದು ಪೋಟೋ ಸಾವಿರ ಪದಗಳಿಗೆ ಸಮ, ಮನಸ್ಸಿನ ಭಾವನೆ ತಿಳಿಸಲಾರದ್ದನ್ನು ಪೋಟೋ ತೋರಿಸುತ್ತದೆ ಎಂದರು. ಛಾಯಾಗ್ರಹಣ ತರಬೇತಿದಾರ ಅಮತ ಚರಂತಿಮಠ ಮಾತನಾಡಿ, ಹೊಸ ಛಾಯಾಗ್ರಾಹಕರು ಪೋಟೋಗ್ರಫಿ ತರಬೇತಿ ಪಡೆದು ವತ್ತಿ ಜೀವನ ನಡೆಸಬೇಕು.ಆಗ ಮಾತ್ರ ಗ್ರಾಹಕರನ್ನು ಉಳಿಸಿ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಪ್ರತಿಷ್ಠಿತ ಛಾಯಾಶ್ರೀ ಪ್ರಶಸ್ತಿ ವಿಜೇತ ಮಹಾನಿಂಗ ಮೇಲ್ಮಟ್ಟಿ ಮತ್ತು ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪ್ರಶಸ್ತಿ ವಿಜೇತ ರಾವೇಂದ್ರ ದೇವಗೋಜಿ ಅವರನ್ನು ಸನ್ಮಾನಿಸಲಾಯಿತು. ಛಾಯಾಗ್ರಾಹಕರಿಗೆ ಲೇಬರ್ ಕಾರ್ಡ್ ವಿತರಿಸಲಾಯಿತು. ಸಂಘದ ಜಿಲ್ಲಾಧ್ಯಕ್ಪ ಲಕ್ಷ$್ಮಣ ಯಮಕನಮರ್ಡಿ, ಕಾರ್ಮಿಕ ನಿರೀಕ್ಪಕ ಮಹಾಂತೇಶ ಹಿರೇಮಠ, ಬಸವರಾಜ ರಾಮಣ್ಣವರ, ಸುರೇಶ ರಜಪೂತ, ತಾಲೂಕು ಉಪಾಧ್ಯ ಶಿವಾನಂದ ಪಾಟೀಲ, ಕಾರ್ಯದರ್ಶಿ ಬಸವರಾಜ ದಾರೋಜಿ, ಖಜಾಂಚಿ ಉಮೇಶ ಕರಗುಪ್ಪಿ, ಸದಸ್ಯ ಸಿದ್ರಾಮ ಮುತ್ತೂರ ಇತರರು ಇದ್ದರು. ಬಸವರಾಜ ದರೋಜಿ ಸ್ವಾಗತಿಸಿದರು ಪ್ರಶಾಂತ ನಾಗನೂರಿ ವಂದಿಸಿದರು