ಹಾವು ಕಚ್ಚಿ ಕೂಲಿ ಕಾರ್ಮಿಕ ಸಾವು

Published on

ಕಾಸರಗೋಡು: ಮನೆ ಸಮೀಪದ ತೆಂಗಿನ ತೋಟದಿಂದ ತೆಂಗಿನಕಾಯಿ ಸಂಗ್ರಹಿಸುವ ಮಧ್ಯೆ ವಿಷಪೂರಿತ ಹಾವಿನ ಕಡಿತಕ್ಕೀಡಾಗಿ ಕೂಲಿ ಕಾರ್ಮಿಕ ಮೃತಪಟ್ಟಿದ್ದಾರೆ. ಪೈವಳಿಕೆ ಪಂಚಾಯಿತಿ ಕುರುಡಪದವು ಪಾರೆಕೋಡಿ ನಿವಾಸಿ ಕೃಷ್ಣಪ್ಪ ಮೂಲ್ಯ(72) ಮೃತಪಟ್ಟವರು. ಮಂಗಳವಾರ ಸಂಜೆ ಮನೆ ಸನಿಹದ ಮರದಿಂದ ಬಿದ್ದ ತೆಂಗಿನಕಾಯಿ ಸಂಗ್ರಹಿಸಲು ತೆರಳಿದ್ದ ಇವರಿಗೆ ನಾಗರ ಹಾವು ಕಡಿದಿತ್ತೆನ್ನಲಾಗಿದೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net