ಕಾಂಕ್ರೀಟ್ ಸ್ಲಾಬ್ ಕುಸಿದು ಕಾರ್ಮಿಕ ಸಾವು

IMG-20211103-WA0004
Published on

ಕೋಟ: ಕೋಟತಟ್ಟು ಪಡುಕರೆ ಶಿರಸಿ ಮಾರಿಕಾಂಬ ದೇವಳದ ಹಿಂಭಾಗ ಮನೆ ಕಟ್ಟಡ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕಾಂಕ್ರೀಟ್ ಸ್ಲಾಬ್ ಕುಸಿದು ಬಿದ್ದು ಒರ್ವ ಸಾವು ಇನ್ನೊರ್ವ  ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಸಾಲಿಗ್ರಾಮ ಗೆಂಡೆಕೆರೆ ನಿವಾಸಿ ಗಾರೆಮೇಸ್ತ್ರಿ ಮಂಜುನಾಥ (36) ತಲೆಗೆ ತೀವ್ರತರಹದ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ.

ಮತ್ತೊರ್ವ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿರುವ ಚೇತನ (28 ವ) ಎಂಬವರು ಗಂಭೀರ ಗಾಯಗೊಂಡಿದ್ದು,  ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕೋಟತಟ್ಟು ಪಡುಕರೆ ರಾಜಶೇಖರ ಹಂದೆ ಅವರ ನೂತನ ಮನೆ ಕಾಮಗಾರಿ ನಡೆಯುವ ವೇಳೆ ಈ ಘಟನೆ  ನಡೆದಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net