

ಹುಬ್ಬಳ್ಳಿ: ನಗರದಲ್ಲಿ ಆಟೋ ಚಾಲಕರಿಗೆ ಸರ್ಕಾರಿ ಯೋಜನೆ ಅಡಿಯಲ್ಲಿ ಕಾರ್ಮಿಕ ಕಾರ್ಡ್, ಸದಸ್ಯತ್ವ ಕಾರ್ಡ್ ಮತ್ತು ಮಹಿಳೆಯರಿಗೆ ಆಟೋ ಲೈಸನ್ಸ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮ ಉತ್ತರ ಕರ್ನಾಟಕ ಆಟೋ ಚಾಲಕರ ಸಂದ ಆಶ್ರಯದಲ್ಲಿ ನಡೆಯಿತು. ಸಾರಿಗೆ ಇಲಾಖೆ ಅಧಿಕಾರಿ ಶ್ರೀಕಾಂತ ಬಡಿಗೇರ, ಪಿಎಸ್ಐ ಪದ್ಮಾ, ಉತ್ತರ ಕರ್ನಾಟಕ ಆಟೋ ಚಾಲಕರ ಸಂದ ಅಧ್ಯಕ್ಷ ಶೇಖರಯ್ಯ ಮಠಪತಿ, ಮುರಳಿ ಇಂಗಳಹಳ್ಳಿ, ಮಹಾವೀರ ಬಿಲಾನ್, ದಾವಲಸಾಬ್ ಕುರಟ್ಟಿ, ಶಂಕರ ಆಚಾರ್ಯ, ನಿಂಗಪ್ಪ ಗೋರಪ್ಪನವರ, ಪವನ್ ಹಾವರಗಿ ಇತರರು ಉಪಸ್ಥಿತರಿದ್ದರು.