

ವಿಜಯವಾಣಿ ಸುದ್ದಿಜಾಲ ಗದಗ
ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಅವರನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮೋಹನ ಭಜಂತ್ರಿ ಹೇಳಿದರು.
ಕಾರ್ಮಿಕ ಕಲ್ಯಾಣ ಸಂಸ್ಥೆ ವತಿಯಿಂದ ಶುಕ್ರವಾರ ಸಂಸ್ಥೆ ಕಚೇರಿಯಲ್ಲಿ ಏರ್ಪಡಿಸಿದ್ದ ಕಾಮಿರ್ಕ ಲಾನುಭವಿಗಳ ಕಾರ್ಡ ವಿತರಣೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರು ಪರಿಶ್ರಮ ಜೀವಿಗಳು. ದುಡಿಮೆಯನ್ನು ನಂಬಿ ಬದುಕುವ ವರ್ಗ. ಕಾಮಿರ್ಕರ ಮಕ್ಕಳು ಕಾಮಿರ್ಕರಾಗುವ ಬದಲಾಗಿ ಅವರು ಉನ್ನತ ಅಧಿಕಾರಿಗಳಬೇಕು. ಸಾರ್ಕಾರಿ ಉದ್ಯೋಗಿಗಳಾಗಬೇಕು. ಸ್ವಯಂ ಉದ್ಯೋಗ ಕೈಗೊಂಡು ಸಾಧನೆ ಮಾಡಬೇಕು. ಹೆತ್ತವರನ್ನು, ಹಿರಿಯರನ್ನು ಗೌರವಿಸುವ ಮನುಷ್ಯತ್ವ ಮತ್ತು ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಗದಗ ಜಿಲ್ಲೆಯ ಕಾರ್ಮಿಕರು ಸಂಟಿಕರಾಗಬೇಕು, ಕಾಮಿರ್ಕ ಸಂಟನೆಯಲ್ಲಿ ಸದಸ್ಯತ್ವ ಪಡೆಯುವ ಮೂಲಕ ತಾವೂ ಪ್ರಗತಿ ಹೊಂದಬೇಕು. ಇತರ ಕಾಮಿರ್ಕರೂ ಪ್ರಗತಿ ಹೊಂದಲು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಲಾನುಭವಿ ಕಾರ್ಮಿಕರಿಗೆ ಕಾರ್ಡ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮೋಹನ ಭಜಂತ್ರಿ, ಎಂ. ಎಂ. ಕುಕನೂರ, ಗುರುರಾಜ ಗೌರಿ, ಬಿ. ಎಂ. ಕುಕನೂರ ಅವರನ್ನು ಕಾಮಿರ್ಕ ಕಲ್ಯಾಣ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ನಿಂಗಪ್ಪ ಕಟ್ಟಿಮನಿ, ಕೆ. ಬಿ. ಕುಡಗುಂಟಿ, ಶಂಕರಗೌಡ ಭರಮಗೌಡ್ರ, ರಮೇಶ ಬಿಳೆಯಲಿ, ಶಂಕರ ಗುರುಬಸಣ್ಣವರ ಹಲವರು ಇದ್ದರು.