ಮಾವಿನ ಮರದ ಬಿದ್ದು ಕೂಲಿ ಕಾರ್ಮಿಕನ ಬೆನ್ನು ಮೂಳೆ ಮುರಿತ

tunga nagar police station
ತುಂಗಾನಗರ ಠಾಣೆ
Published on

ಶಿವಮೊಗ್ಗ: ಗೋಪಾಳದಲ್ಲಿ ಮನೆಯೊಂದರ ಮುಂದೆ ಮಾವಿನ ಮರದ ರೆಂಬೆ ಕತ್ತರಿಸುವಾಗ ಆಯಾ ತಪ್ಪಿ ಕೆಳಗೆ ಬಿದ್ದು ಕೂಲಿ ಕಾರ್ಮಿಕನ ಬೆನ್ನು ಮೂಳೆ ಮುರಿದಿದೆ. ಈ ಹಿನ್ನೆಲೆ ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಾಫರ್ (38)ಎಂಬುವರ ಬೆನ್ನು ಮೂಳೆ ಮರುದಿದ್ದು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜು.30ರಂದು ಗೋಪಾಳದ ಮನೆಯೊಂದರ ಮುಂದೆ ಘಟನೆ ಸಂಭವಿಸಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದ ಹಿನ್ನೆಲೆ ಮನೆ ಮಾಲೀಕನ ವಿರುದ್ಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net